ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್. ಇವರಿಬ್ಬರೂ ಜಸ್ಟ್ 8 ದಿನದ ರಿಪೇರಿ ಕೆಲಸಕ್ಕಾಗಿ ಅಂತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ರು. ಅಲ್ಲೇನೋ ಇಂಧನ ಸಪ್ಲೈ ಮಾಡೋ ಕ್ಲಸ್ಟರ್‌ನಲ್ಲಿ ಹೀಲಿಯಂ ಲೀಕೇಜ್ ಆಗ್ತಿದ್ದಕ್ಕೆ 8 ದಿನ ಇರೋಕೆ ಹೋದವರು, ಬರೋಬ್ಬರಿ 286 ದಿನ.. ಅಂದ್ರೆ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿದ್ದು ಭೂಮಿಗೆ ವಾಪಸ್ ಬಂದಿದ್ದಾರೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗೋದು ಎಷ್ಟು ಎಷ್ಟು ಕ್ರಿಟಿಕಲ್ ಪ್ರಯಾಣನೋ.. ಅಷ್ಟೇ ಕ್ರಿಟಿಕಲ್ ಅಲ್ಲಿಂದ ಭೂಮಿಗೆ ವಾಪಸ್ ಬರೋದು. ಯಾಕಂದ್ರೆ, ಬಾಹ್ಯಾಕಾಶಕ್ಕೆ ಹೋದವರೆಲ್ಲ ಸುರಕ್ಷಿತವಾಗಿ ವಾಪಸ್ ಬರಲ್ಲ. ಸುನಿತಾ ಅವರಿಗೆ 59 ವರ್ಷ ಆಗಿದ್ರೆ, ವಿಲ್ಮೋರ್ ಅವರಿಗೆ 62 ವರ್ಷ. ಆ ಲೆಕ್ಕದಲ್ಲಿ ಇಬ್ಬರೂ ಅದೃಷ್ಟವಂತರೂ ಅಂತಾ ಹೇಳ್ಬಹುದು.
ಆದರೆ ಈ ಹಿಂದೆ ಇಂತಹ ಅದೃಷ್ಟ ಇಲ್ಲದೆ 15 ಜನ ಬಾಹ್ಯಾಕಾಶ ಯಾತ್ರಿಗಳನ್ನ ಜಗತ್ತು ಕಳ್ಕೊಂಡಿದೆ. ಹಾಗೆ ಪ್ರಾಣತ್ಯಾಗ ಮಾಡಿದವರಲ್ಲಿ ಅಮೆರಿಕನ್ನರೂ ಇದ್ದಾರೆ. ರಷ್ಯನ್ನರೂ ಇದ್ದಾರೆ. ಭಾರತೀಯರೂ ಇದ್ದಾರೆ. ಬಾಹ್ಯಾಕಾಶದಲ್ಲಿ ನಡೆದ ದುರಂತಗಳ ಕಥೆಗಳ ಇತಿಹಾಸ ನೋಡ್ತಾ ಹೋದ್ರೆ, ಅಂತಾದ್ದೊಂದು ಅಪಘಾತ, ದುರಂತ ನಡೆದದ್ದು 1967ರಲ್ಲಿ.
1967, ಏಪ್ರಿಲ್ 24 : ಮೊದಲ ಬಾಹ್ಯಾಕಾಶ ದುರಂತ
ಈ ಘಟನೆಯಲ್ಲಿ ಪ್ಯಾರಾಚೂಟ್ ಕೈಕೊಟ್ಟಿದ್ದಕ್ಕೆ ರಷ್ಯಾ ಗಗನಯಾತ್ರಿಯೊಬ್ರು ಭಸ್ಮ ಆಗಿದ್ರು. ಹಾಗೆ ಮೃತಪಟ್ಟ ಮೊದಲ ಗಗನಯಾತ್ರಿ ಸೋವಿಯತ್ ರಷ್ಯಾದವರು. ಹೆಸರು ವ್ಲಾಡಿಮಿರ್ ಕೊಮರೋವ್. ಕೊಮರೊವ್ ಅನ್ನೋ ರಷ್ಯನ್ ಗಗನಯಾತ್ರಿಯನ್ನ ರಷ್ಯಾದ ಸೂಯೆಜ್ 1 ಅನ್ನೋ ಸ್ಪೇಸ್ ಶಿಪ್ ಕರ್ಕೊಂಡ್ ಹೋಗಿತ್ತು. ಚಂದ್ರನನ್ನ ಒಂದ್ ರೌಂಡ್ ಹಾಕ್ಕೊಂಡು ಬರೋವಾಗ ಇನ್ನೊಂದು ಸ್ಪೇಸ್ ಶಿಪ್ ಸೂಯೆಜ್ 2, ಬಾಹ್ಯಾಕಾಶದಲ್ಲೇ ಕನೆಕ್ಟ್ ಆಗ್ಬೇಕಿತ್ತು. ಆದರೆ ಹಾಗೆ ಕನೆಕ್ಟ್ ಆಗೋ ಟೈಮಲ್ಲೇ ಎರಡೂ ಸ್ಪೇಸ್ ಶಿಪ್ಪುಗಳು ಆಕಾಶದಲ್ಲಿ ಒಂದಕ್ಕೊಂದು ಸಣ್ಣದಾಗಿ ಕ್ಲಾಷ್ ಆದ್ವು. ಅಷ್ಟೇ.
ಸೋಲಾರ್ ಸೆಲ್ ಫೇಯ್ಲ್ ಆಗಿ, ಬೆಂಕಿ ಹೊತ್ಕೊಳ್ತು. ಇಂತಾದ್ದೊಂದು ದುರಂತ ಆಗಬಹುದು ಅನ್ನೋ ಅಂದಾಜು ಮಾಡಿದ್ದ ಒಂದು ಪ್ಯಾರಾಚೂಟ್ ವ್ಯವಸ್ಥೆಯನ್ನೂ ಸೇಫ್ಟಿಗೆ ಇಟ್ಟಿದ್ರು ಆದರೆ ಬೇಕಾದ ಟೈಮಲ್ಲಿ ಆ ಪ್ಯಾರಾಚೂಟ್ ಓಪನ್ ಆಗ್ಲಿಲ್ಲ. ವ್ಲಾಡಿಮಿರ್ ಕೊಮರೋವ್, ಆಕಾಶದಲ್ಲೇ ಭಸ್ಮ ಆಗ್ಬಿಟ್ರು.
1969, ನವೆಂಬರ್ 14, ಎರಡನೇ ದುರಂತ ಜಸ್ಟ್ ಮಿಸ್..!
ಎರಡನೇ ದುರಂತದಲ್ಲಿ ಸಮುದ್ರದ ಅಲೆಯಿಂದ ಗಗನಯಾತ್ರಿಗಳು ಬಚಾವ್ ಆಗಿದ್ದ ಕಥೆ ಇದೆ. ಏನಂದ್ರೆ, ನಾವು ಸುನಿತಾ ಮತ್ತು ವಿಲ್ಮೋರ್ ಅವರಿದ್ದ ನೌಕೆ ಸಮುದ್ರಕ್ಕೆ ಇಳಿದಿದ್ದನ್ನ ನೋಡಿದ್ವಲ್ಲ. ಅದು ಧಗಧಗ ಉರೀತಾನೇ ಸಮುದ್ರಕ್ಕೆ ಬಿತ್ತು. ಹಾಗೆ ಬೆಂಕಿ ಹೊತ್ಕೊಳ್ಳುತ್ತೆ ಅಂತಾನೇ ಸಮುದ್ರಕ್ಕೆ ಲ್ಯಾಂಡ್ ಮಾಡ್ತಾರೆ. ಆದರೆ 1969, ನವೆಂಬರ್ 14ನೇ ತಾರೀಕು ಅಮೆರಿಕದ 2ನೇ ಚಂದ್ರಯಾನ ಭೂಮಿಗೆ ವಾಪಸ್ ಆಗ್ತಾ ಇತ್ತು. ನೌಕೆ, ಸಮುದ್ರಕ್ಕೆ ಬಿದ್ದ ಟೈಮಲ್ಲೇ, ಸಮುದ್ರದಲ್ಲಿ ಬೃಹತ್ ಅಲೆ ಒಂದು ಉದ್ಭವವಾಯ್ತು. ನೌಕೆಯಲ್ಲಿದ್ದವ್ರು ಹೋಗೇ ಬಿಟ್ರು ಅನ್ನೋ ಆತಂಕ ಶುರುವಾಗಿತ್ತು. ಆದರೆ ತಕ್ಷಣ ಟ್ರೀಟ್ ಮೆಂಟ್ ಸಿಕ್ಕ ಕಾರಣ ಏನೂ ಆಗ್ಲಿಲ್ಲ.
1975, ವಿಷಾನಿಲದಿಂದ ಬಚಾವ್ ಆಗಿದ್ದ ಗಗನಯಾತ್ರಿ
ಈ ಘಟನೆ ಆಗಿದ್ದು 1975ರಲ್ಲಿ. ಆಗ ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳು ಜಂಟಿಯಾಗಿ ಅಪೋಲೋ-ಸೂಯೆಜ್ ಪ್ರಾಜೆಕ್ಟ್ ಮಾಡ್ತಿದ್ವು. ಅಮೆರಿಕದವ್ರು ಮೂರು ಜನ, ರಷ್ಯಾದ ಇಬ್ಬರು ಗಗನಯಾತ್ರಿಗಳು ಒಟ್ಟಿಗೇ ಹೋಗಿ, ಹಲವು ಸಂಶೋಧನೆ ಮಾಡಿ ವಾಪಸ್ ಭೂಮಿಗೆ ಬರ್ತಾ ಇದ್ದಾಗ, ಇನ್ನೇನು ಭೂಮಿಗೆ ಹತ್ತಿರ ಬಂತು ಅನ್ನೋವಾಗ.. ಗಗನನೌಕೆಯಲ್ಲಿ ಟೆಟ್ರಾಕ್ಸೈಡ್ ನೈಟ್ರೋಜನ್ ಅನ್ನೋ ವಿಷಾನಿಲ ಸೋರಿಕೆಯಾಗಿತ್ತು. ಭೂಮಿಗೆ ಹತ್ತಿರ ಬಂದಿದ್ದ ಕಾರಣ, ಗಗನ ನೌಕೆ ಲ್ಯಾಂಡ್ ಆಗಿ, ಅವರನ್ನೆಲ್ಲ ಚಿಕಿತ್ಸೆ ಕೊಟ್ಟು ಬಚಾವ್ ಮಾಡ್ಲಾಗಿತ್ತು.
1986, ಜನವರಿ 18, 7 ಗಗನಯಾತ್ರಿಗಳು ನಿಮಿಷದಲ್ಲೇ ಭಸ್ಮ..!
ಜಸ್ಟ್ ಒಂದು ನಿಮಿಷದಲ್ಲೇ 7 ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ದ ಘಟನೆ 1986ರಲ್ಲಿ ನಡೆದಿತ್ತು. 1986ರ ಜನವರಿ 18ನೇ ತಾರೀಕು. ಅಮೆರಿಕದ ಸ್ಪೇಸ್ ಷಟಲ್ ಒಂದು ಭೂಮಿಯಿಂದ ಆಕಾಶಕ್ಕೆ ಹೊರಡ್ತು. ಆಕಾಶಕ್ಕೆ ಚಿಮ್ಮಿದ ಮೇಲೆ ರಾಕೆಟ್ ಮತ್ತು ಷಟಲ್ ಎರಡೂ ಸಪರೇಟ್ ಆಗ್ಬೇಕು. ಆದರೆ ಹಾಗೆ ಸಪರೇಟ್ ಮಾಡೋ ರಬ್ಬರಿನಲ್ಲಿ ಬೆಂಕಿ ಕಾಣಿಸಿಕೊಳ್ತು. ಜಸ್ಟ್ ಒಂದೇ ಒಂದು ನಿಮಿಷದಲ್ಲಿ ನೌಕೆಯಲ್ಲಿದ್ದ ಎಲ್ಲ 7 ಗಗನಯಾತ್ರಿಗಳು ಸುಟ್ಟು ಕರಕಲಾಗಿ ಹೋಗಿದ್ರು.
1955ರಲ್ಲಿ ದೃಷ್ಟಿ ಕಳೆದುಕೊಂಡಿದ್ದ ಗಗನಯಾತ್ರಿ..!
ಇದು 1995ರಲ್ಲಿ ಆದ ಘಟನೆ. ರಷ್ಯಾದ ಗಗನಯಾತ್ರಿ ನಾಮರ್ನ್ ಥಗಾರ್ಡ್ ಅನ್ನೋವ್ರು ಬಾಹ್ಯಾಕಾಶದಲ್ಲಿದ್ರು. ಅಲ್ಲಿ ಗುರುತ್ವಾಕರ್ಷಣೆ ಇಲ್ಲದೇ ಇರೋದ್ರಿಂದ, ಮೊಣಕಾಲಿನ ಜಾಯಿಂಟ್‌ನಲ್ಲಿ ಒಂದು ಮೆಷಿನ್ ಹಾಕಿರ್ತಾರೆ. ಅದರ ಸಹಾಯದಿಂದ ಯಾತ್ರಿಗಳು ವ್ಯಾಯಾಮ ಮಾಡೋಕೆ ಸಾಧ್ಯವಾಗುತ್ತೆ. ಆದರೆ ಆ ಮೆಷಿನ್ ಸಡನ್ನಾಗಿ ಕಳಚಿಕೊಂಡು, ಕಾಲುಗಳು ಮೇಲಕ್ಕೆ ಬಂದ್ ಬಿಟ್ಟಿದ್ವು. ನಾಮರ್ನ್ ಅನ್ನೋ ಗಗನಯಾತ್ರಿಯ ಕಣ್ಣಿಗೆ ಚುಚ್ಚಿಕೊಂಡು, ಆ ಗಗನಯಾತ್ರಿಯ ಕಣ್ಣಿಗೆ ಡ್ಯಾಮೇಜ್ ಆಗಿತ್ತು.
2003, ಫೆಬ್ರವರಿ 1 ದುರಂತ. ಕಲ್ಪನಾ ಚಾವ್ಲಾ ಜೊತೆ 7 ಗಗನಯಾತ್ರಿಗಳು ಭಸ್ಮ
2003ರ ಫೆಬ್ರವರಿ 1ನೇ ತಾರೀಕು. ಕಲ್ಪನಾ ಚಾವ್ಲಾ ಅವರಷ್ಟೇ ಅಲ್ಲ, ಅವರ ಜೊತೆ ಇನ್ನೂ 6 ಮಂದಿ ಗಗನಯಾತ್ರಿಗಳಿದ್ರು. ಅವರನ್ನ ಕರ್ಕೊಂಡು ಬರ್ತಿದ್ದ ಕೊಲಂಬಿಯಾ ಗಗನ ನೌಕೆ, ಭೂಮಿ ತಲುಪೋದಕ್ಕೆ ಇನ್ನೂ 2 ಲಕ್ಷ ಕಿಲೋ ಮೀಟರ್ ಬರ್ಬೇಕಿತ್ತು. ಭೂಮಿಯನ್ನ ತಲುಪೋದಕ್ಕೆ ಇನ್ನು 16 ನಿಮಿಷ ಅಷ್ಟೇ ಬಾಕಿ ಇತ್ತು. ಆದರೆ ಆಗ ನೌಕೆಗೆ ಅಳವಡಿಸಿದ್ದ ರಕ್ಷಾಕವಚ ಹರಿದು ಹೋಗಿ, ಗಗನನೌಕೆಗೆ ಬೆಂಕಿ ಹೊತ್ಕೊಳ್ತು. ಯಾಕಂದ್ರೆ ಆಗ ಗಗನನೌಕೆಯ ಸುತ್ತ 3800 ಡಿಗ್ರಿ ಶಾಖ ಇರುತ್ತೆ. ಆ ಶಾಖಕ್ಕೆ ಗಗನ ನೌಕೆ ಬೆಂಕಿ ಚೆಂಡಿನಂತಾಗಿ ಭೂಮಿಗೆ ಬಿತ್ತು. ನಾವು ಭಾರತೀಯರು, ಕಲ್ಪನಾ ಚಾವ್ಲಾ ಅವರು ಇಂಡಿಯನ್ ಅನ್ನೋ ಕಾರಣಕ್ಕೆ ಅವರೊಬ್ಬರ ಹೆಸರನ್ನ ನಾವೆಲ್ಲ ನೆನಪು ಮಾಡಿಕೊಳ್ತೇವೆ. ಆವತ್ತು ಕಲ್ಪನಾ ಚಾವ್ಲಾ ಸೇರಿ ಒಟ್ಟು 7 ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ರು.
2013 ಬಾಹ್ಯಾಕಾಶ ನಡಿಗೆ ವೇಳೆ ಯಾತ್ರಿಯ ಸೂಟ್ ಒಳಗೆ ನೀರು ನುಗ್ಗಿತ್ತು
ಈ ದುರಂತ 2013ರಲ್ಲಿ ಆಗಿತ್ತು. ಇಟಲಿಯ ಗಗನಯಾನಿ ಲೂಕಾ ಪಾರ್ ಮಿಟಾನೋ ಸ್ಪೇಸ್ ವಾಕ್ ಮಾಡೋವಾಗ, ಅವರು ಧರಿಸಿದ್ದ ಸೂಟ್ ಒಳಗೆ, ಕೂಲೆಂಟ್ ವಾಟರ್ ಲೀಕ್ ಆಗಿತ್ತು. ತಕ್ಷಣ ಸ್ಪೇಸ್ ವಾಕ್ ಬಿಟ್ಟು, ನೌಕೆಯೊಳಗೆ ಬಂದು ಹೆಲ್ಮೆಟ್ ತೆಗೆದಿದ್ದ ಮಿಟಾನೋ ಅವ್ರು ತಕ್ಷಣ ಗಗನನೌಕೆಯ ಒಳಗೆ ಬಂದಿದ್ರು. ಲೇಟ್ ಆಗಿದ್ದರೆ, ಅದು ಇನ್ನೊಂದು ದುರಂತ ಆಗ್ತಾ ಇತ್ತು.
ಪ್ರಾಣತ್ಯಾಗ ಮಾಡಿದ ಗಗನಯಾತ್ರಿಗಳು ಒಟ್ಟು 15
ಇದೂವರೆಗೆ ಬಾಹ್ಯಾಕಾಶ ಯಾನಕ್ಕೆ ಹೋಗಿದ್ದ ಯಾತ್ರಿಗಳಲ್ಲಿ ಒಟ್ಟು 15 ಜನ ಪ್ರಾಣತ್ಯಾಗ ಮಾಡಿದ್ಧಾರೆ. ಇಲ್ಲಿ ಇನ್ನೊಂದು ವಿಶೇಷ ಗಮನದಲ್ಲಿಟ್ಕೋಬೇಕು. ಬಾಹ್ಯಾಕಾಶ ಯಾತ್ರೆಗೆ ಹೋಗೋವ್ರು, ತಮ್ಮ ಸಾವಿನ ಡಿಕ್ಲರೇಷನ್ ಬರೆದುಕೊಟ್ಟೇ ಹೋಗಿರ್ತಾರೆ. ಅಂದ್ರೆ ಅವರ ಕಣ್ಣ ಮುಂದೆ ಗೆದ್ದರೆ ಪ್ರಖ್ಯಾತಿ, ಸತ್ತರೆ ಸಮಾಧಿ ಅನ್ನೋದೂ ಗೊತ್ತಿರುತ್ತೆ. ಇಷ್ಟೆಲ್ಲ ಗೊತ್ತಿದ್ರೂ, ಮುಂದಿನ ಪೀಳಿಗೆಗಾಗಿ ಅವರು ಕೈಗೊಳ್ಳೋ ಸಾಹಸ ಇದ್ಯಲ್ಲ, ಅದಕ್ಕೆ ನಾವೆಲ್ಲ ಹ್ಯಾಟ್ಸಾಫ್ ಹೇಳ್ಲೇಬೇಕು.