ಐಫೋನ್ ಕ್ಯಾಮರಾ ಮೀರುವ ಪ್ರಯತ್ನ ಒನ್‌ಪ್ಲಸ್ 13!

ಕ್ಯಾಮರಾ ಅಂದರೆ ಐಫೋನ್ ಕ್ಯಾಮರಾ ಅನ್ನುವ ನಂಬಿಕೆಯನ್ನು ಸುಳ್ಳಾಗಿಸುವತ್ತ ಅನೇಕ ಫೋನ್ ಕಂಪೆನಿಗಳು ಹೆಜ್ಜೆಯಿಟ್ಟಿವೆ.

Untitled design 2025 01 28t154645.224 1140x570

ತಜ್ಞರು ಮುಖ್ಯವಾಗಿ ನಾಲ್ಕು ಅಂಶಗಳನ್ನು ಗಮನಿಸುತ್ತಾರೆ. ಆಪರೇಟಿಂಗ್ ಸಿಸ್ಟಮ್, ರೆಸಲ್ಯೂಷನ್, ಬ್ಯಾಟರಿ ಮತ್ತು ಕ್ಯಾಮರಾ. ಇವುಗಳ ಪೈಕಿ ಕೆಲವು ವರ್ಷಗಳ ಹಿಂದಿನ ತನಕವೂ ಕ್ಯಾಮರಾಕ್ಕೆ ಕೊನೆಯ ಸ್ಥಾನವಿತ್ತು. ಈಗ ಕ್ಯಾಮರಾ ಮೊದಲನೇ ಆಯ್ಕೆಯಾಗಿದೆ ಮತ್ತು ಅತ್ಯುತ್ತಮ ಕಂಪೆನಿಗಳ ಕ್ಯಾಮರಗಳನ್ನು ಫೋನಿನಲ್ಲಿ ಅಳವಡಿಸುವುದನ್ನು ಕೂಡ ಫೋನ್ ಕಂಪೆನಿಗಳು ಮಾಡುತ್ತಾ ಬಂದಿವೆ.

ಕ್ಯಾಮರಾ ಅಂದರೆ ಐಫೋನ್ ಕ್ಯಾಮರಾ ಅನ್ನುವ ನಂಬಿಕೆಯನ್ನು ಸುಳ್ಳಾಗಿಸುವತ್ತ ಅನೇಕ ಫೋನ್ ಕಂಪೆನಿಗಳು ಹೆಜ್ಜೆಯಿಟ್ಟಿವೆ. ಸಹಜ ಬೆಳಕು, ಸಹಜ ಬಣ್ಣ ಮತ್ತು ಸಹಜತೆಯಿಂದ ಕೂಡಿದ ಪೋಟೋಗಳಿಗೆ ಐಫೋನ್ ಹೆಸರಾಗಿತ್ತು. ಅದರಲ್ಲಿ ತೆಗೆದ ಫೋಟೋಗಳು ಒಡೆದು ಪಿಕ್ಸಲೇಟ್ ಆಗುತ್ತಿರಲಿಲ್ಲ. ಎಷ್ಟೇ ಎನ್‌ಲಾರ್ಜ್ ಮಾಡಿದರೂ ಫೋಟೋ ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು. ಅಲ್ಲದೇ, ಫೋಟೋಗಳು ಎಸ್ಎಲ್‌ಆರ್ ಕೆಮರಾದಲ್ಲಿ ಶೂಟ್ ಮಾಡಿದಂತೆ ಕಾಣುತ್ತಿದ್ದವು.

ADVERTISEMENT
ADVERTISEMENT

ವಿಭಿನ್ನ ಸೆಟ್ಟಿಂಗುಗಳು ಕೂಡ ಸಾಧ್ಯವಿದವು. ಪೋರ್ಟ್‌ರೇಟ್ ಮೋಡ್ ಫೋಟೋ ಪ್ರಿಯರಿಗೆ ಸಹಕರಿಸುತ್ತಿತ್ತು. ಎಲ್ಲಕ್ಕಿಂತ ಬೇರೆ ಫೋನುಗಳಲ್ಲಿ ಇರುವಂತೆ ಕೊಕ್ಕರೆ ಬಿಳುಪಾಗಿ ಮುಖವನ್ನು ತೋರಿಸುವ ಸೆಲ್ವಿ ಕ್ಯಾಮರಾವನ್ನು ಐಫೋನ್ ದೂರವಿಟ್ಟಿತ್ತು. ನಂತರದ ಸ್ಥಾನವನ್ನು ಸ್ಯಾಮ್ಸ್ಂಗ್ ಫೋನು ಹೊಂದಿತ್ತು. ಇವತ್ತಿಗೂ ಐಫೋನ್ ಬೆಲೆಗಿಂತಲೂ ದುಬಾರಿ ಫೋನುಗಳನ್ನು ಸ್ಯಾಕ್ಸಿಂಗ್ ಮಾರುಕಟ್ಟೆಗೆ ತಂದಿದೆ. ಆ ಪೋನುಗಳನ್ನು ಅದರ ಕ್ಯಾಮರಾಕ್ಕಾಗಿ ಕೊಳ್ಳುತ್ತಾರೆ.

ಇವೆರಡರ ಪೈಪೋಟಿಯಲ್ಲಿ ಬೇರೆ ಫೋನುಗಳ ಕ್ಯಾಮರಾಗಳು ಮಂಕಾಗಿ ಕಾಣುತ್ತಿದ್ದವು. ಇದೀಗ ವನ್‌ಪ್ಲಸ್ 13 ಬೇರೆಲ್ಲಾ ಫೋನುಗಳಿಗೆ ಸೈಡ್ಡು ಹೊಡೆಯಲು ಸಿದ್ದವಾಗಿದೆ. ವನ್ ಪ್ಲಸ್ 13 ಫೋನಿನ ಹ್ಯಾಸಲ್‌ಬ್ಲಾಡ್ ಕ್ಯಾಮರಾ ಎಲ್ಲರ ಮ್ ಪರ್ ಸೆಕೆಂಡ್ ಶೂಟ್ ಮನಗೆದ್ದಿದೆ. 4ಕೆ ರೆಸಲ್ಯೂಷನ್, 60 ಪ್ರೇಮ್ಸ್ ಹ ಮಾಡಬಲ್ಲ ಕ್ಯಾಮರಾ ಇದು.
ತನ್ನ 13ನೇ ಫ್ಲಾಗ್‌ಪ್ ಫೋನಿನಲ್ಲಿ ವನ್‌ಪ್ಲಸ್ ತನ್ನ ಸಮಕಾಲೀನರ ಜತೆಗೆ ಸ್ಪರ್ಧಿಸಲೇಬೇಕಾಗಿದೆ. ಹೀಗಾಗಿ ನೀವು ವನ್ ಪ್ಲಸ್ 13 ಕ್ಯಾಮರಾದಲ್ಲಿ ಶೂಟ್ ಮಾಡಿದ ವಿಡಿಯೋಗಳನ್ನೂ ಗಮನಿಸಲೇಬೇಕು. ವನ್ ಪ್ಲಸ್ 13ನ ಹಿಂಬದಿಯಲ್ಲಿ ಮೂರು ಕ್ಯಾಮರಾಗಳಿವೆ. 50 ಮೆಗಾಪಿಕೆಲ್ ವೈಡ್ ಕ್ಯಾಮರಾ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್, 50 ಮೆಗಾಪಿಕ್ಸೆಲ್ ಶ್ರೀ ಎಕ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟಾ ವೈಡ್ ಕ್ಯಾಮರಾ. ಹೀಗೆ ಮೂರೂ ಕ್ಯಾಮರಾಗಳೂ 50 ಮೆಗಾಪಿಕ್ಸೆಲ್ ಇವೆ, 120 ಎಕ್ಸ್ ಝೂಮ್ ರೇಂಜ್ ಕೂಡ ಇದರಲ್ಲಿದೆ.

ಆದರೆ 120 ಎಕ್ಸ್-ನಲ್ಲಿ ಉತ್ತಮ ಗುಣಮಟ್ಟದ ಫೋಟೋ ಕ್ಲಿಕ್ ಮಾಡಬಹುದೇ ಎಂದು ನೀವು ಕೇಳಿದರೆ ಉತ್ತರಿಸುವುದು ಕಷ್ಟ. 15 ಎಕ್ಸ್-20 ಎಕ್ಸ್ ಝೂಮ್ ನಲ್ಲಿ ಅತ್ಯುತ್ತಮ ಫೋಟೋ ಬರುತ್ತದೆ ಅನ್ನುವುದು ನಮ್ಮ ಅನುಭವ, ಇದಕ್ಕಿಂತ ಹೆಚ್ಚು ಝೂಮ್ ಮಾಡಿದರೆ ಆ ಫೋಟೋಗಳನ್ನು ಪ್ರಾಸೆಸ್ ಮಾಡುವ ಸಾಫ್ಟ್‌ವೇರ್ ಇನ್ನೂ ಉತ್ತಮ ಗುಣಮಟ್ಟದ್ದು ಆಗಿರಬೇಕಾಗುತ್ತದೆ. ಇಲ್ಲದಿದ್ದರೆ ಫೋಟೋಗಳಲ್ಲಿ ವಿವರಗಳು ಕರಗಿಹೋಗುತ್ತವೆ.
ಹೀಗಾಗಿ ಲೈವ್ ಈವೆಂಟುಗಳನ್ನು ಶೂಟ್ ಮಾಡುವವರಿಗೆ ವಿವೋ ಅಥವಾ ಸ್ಯಾಮ್ಸ್ಂಗ್ ವಾಸಿ ಅನ್ನಿಸಬಹುದು, ಹತ್ತಿರದ ಫೋಟೋಗಳನ್ನು ಶೂಟ್ ಮಾಡುವುದಕ್ಕೆ ಮಾತ್ರ ವನ್ ಪ್ಲಸ್ 13 ಅತ್ಯುತ್ತಮ ಆಯ್ಕೆ. ವಿವರಗಳು ಸ್ಪಷ್ಟವಾಗಿ ಸ್ಪುಟವಾಗಿ ಕಾಣಿಸುತ್ತವೆ. ಸೊಗಸಾಗಿ ಪ್ರಾಸೆಸ್ ಆಗುತ್ತವೆ. ಆದರೆ ಹಳೆಯ ಫೋನಿನಂತೆಯೇ ಬಣ್ಣಗಳು ಗಾಢವಾಗಿ, ಫೋಟೋಗಳ ಸಹಜ ಲುಕ್ ಮರೆಯಾದಂತೆ ಕಾಣುತ್ತದೆ.

ಅವುಗಳನ್ನು ಎಡಿಟ್ ಮಾಡಬೇಕಾದ ಅಗತ್ಯವೂ ಪ್ರೊಫೆಶನಲ್ ಛಾಯಾಗ್ರಾಹರಿಗೆ ಕಂಡುಬರಬಹುದು. ಆದರೆ ಸೋಷಲ್ ಮೀಡಿಯಾ ಆಪ್‌ ಗಳ ಪಾಲಿಗೆ ಈ ಕ್ಯಾಮರಾ ಚೆನ್ನಾಗಿದೆ. ಪೋರ್ಟ್‌ರೇಟ್ ಫೋಟೋಗಳ ಶೂಟಿಂಗಿಗೆ ಇದು ಅತ್ಯುತ್ತಮ ಕ್ಯಾಮರಾ. ನೈಟ್ ಮೋಡ್ ಅಂತೂ ಅದ್ಭುತವಾಗಿದೆ. ಹೀಗಾಗಿ ಕ್ಯಾಮರಾ ಬೇಕು, ಆದರೆ ನಾನು ಪ್ರೊಫೆಶನಲ್ ಅಲ್ಲ ಅನ್ನುವವರು ಧೈರ್ಯವಾಗಿ ವನ್ ಪ್ಲಸ್ 13 ಕೊಳ್ಳಬಹುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B

ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc

Exit mobile version