ನಟಿ ಹಾಗೂ ಬಿಜೆಪಿ ವಾಕ್ತಾರೆ ಕಸ್ತೂರಿ ಶಂಕರ್ ತೆಲುಗು ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಚೆನ್ನೈ ಕೋರ್ಟ್ ನಿರ್ದೇಶನದಂತೆ ಪೊಲೀಸರು ನಟಿಯನ್ನು ಹೈದರಾಬಾದ್ನಲ್ಲಿ ಅರೆಸ್ಟ್ ಮಾಡಿ ಚೆನ್ನೈಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕಸ್ತೂರಿ ಶಂಕರ್ ಅವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ತೆಲುಗು ಜನರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ನಟಿ ಕಸ್ತೂರಿ ಶಂಕರ್ನ್ನ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಅನ್ನು ಕಸ್ತೂರಿ ಶಂಕರ್ಗೆ ನೀಡಿದೆ. ನಟಿ ಚೆನ್ನೈ ಕೇಂದ್ರ ಕಾರಾಗೃಹದಿಂದ ರಿಲೀಸ್ ಆಗಿದ್ದು ಜೈಲಿಂದ ಹೊರಬರುತ್ತಿದ್ದಂತೆ ಅವರ ಬೆಂಬಲಿಗರು ಶಾಲು ಹೊದಿಸಿ ಶುಭಾಶಯ ಕೋರಿದ್ದಾರೆ.
ಇದೇ ವೇಳೆ ಮಾತನಾಡಿದ ಕಸ್ತೂರಿ ಶಂಕರ್, ಬಿರುಗಾಳಿಯಂತೆ ನನ್ನನ್ನು ಬದಲಾಯಿಸಿದವರಿಗೆ ಧನ್ಯವಾದ. ಕೆಲವರು ನನ್ನನ್ನ ಜೈಲು ಸೇರುವಂತೆ ಮಾಡಿದರು. ನನ್ನದು ಸಣ್ಣ ಧ್ವನಿ ಆದ್ರೆ ಈಗ ಚಂಡಮಾರುತವಾಗಿ ಬದಲಾಗಿದೆ ಅಂತ ಕಸ್ತೂರಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.