ಜಿ20 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ನಿಂದ ಗಯಾನದ ಜಾರ್ಜ್ ಟೌನ್ಗೆ ಭೇಟಿ ನೀಡಿದ್ದು, ಸರಕಾರದಿಂದ ಬುಧವಾರ ಭವ್ಯ ಸ್ವಾಗತ ದೊರೆತಿದೆ. ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಹಾಗೂ ಇತರ ನಾಯಕರು ಮೋದಿ ಅವರನ್ನು ಜಾರ್ಜ್ ಟೌನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಭಾರತೀಯ ಸಮುದಾಯವು ಭವ್ಯ ಸ್ವಾಗತ ಕೋರಿದೆ.
ದಕ್ಷಿಣ ಅಮೆರಿಕ ರಾಷ್ಟ್ರ ಗಯಾನಗೆ 56 ವರ್ಷಗಳಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೋದಿ ಅವರಿಗೆ ಗಯಾನ ಸರಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿ ಗೌರವಿಸಲಿದೆ. ಇದರೊಂದಿಗೆ ಮೋದಿ ಅವರಿಗೆ ದೊರೆತ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇತ್ತೀಚೆಗಷ್ಟೇ ನೈಜೀರಿಯಾ ಸರಕಾರವು ‘ದಿ ಗ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿ ನೀಡಿ ಗೌರವಿಸಿತ್ತು. ಗಯಾನ ಪ್ರವಾಸದ ವೇಳೆ ಮೋದಿ ಅವರು ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.