ಹೇಗ್ : ನೆದರ್ಲ್ಯಾಂಡ್ ನ ಹೇಗ್ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಗುರುವಾರ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಗಾಜಾದಲ್ಲಿನ ಯುದ್ಧ ಹಾಗೂ 2023 ರ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಗಳಲ್ಲಿ ಯುದ್ಧಾಪರಾಧ ಹಾಗೂ ಮಾನವಕುಲ ಮೇಲೆ ಅಪರಾಧ ನಡೆದಿದೆ ಎಂಬ ಆರೋಪದ ಮೇಲೆ ನೆತನ್ಯಾಹು ಹಾಗೂ ಅವರ ಮಾಜಿ ರಕ್ಷಣಾ ಸಚಿವ ಗ್ಯಾಲಂಟ್ ಮತ್ತು ಹಮಾಸ್ ಅಧಿಕಾರಿಗಳ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ.
ಈ ನಿರ್ಧಾರ ನೆತನ್ಯಾಹು ಮತ್ತು ಇತರರನ್ನು ಅಂತಾರಾಷ್ಟ್ರೀಯವಾಗಿ ಬೇಕಾಗಿರುವ ಶಂಕಿತರನ್ನಾಗಿ ಪರಿವರ್ತಿಸುತ್ತದೆ, ಅವರನ್ನು ಮತ್ತಷ್ಟು ಪ್ರತ್ಯೇಕಿಸುವ ಸಾಧ್ಯತೆಯಿದೆ ಮತ್ತು 13 ತಿಂಗಳ ಸಂಘರ್ಷವನ್ನು ಕೊನೆಗೊಳಿಸಲು ಕದನ ವಿರಾಮದ ಮಾತುಕತೆಯ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ.
ಆದರೆ ಇಸ್ರೇಲ್ ಮತ್ತು ಅದರ ಪ್ರಮುಖ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ನ್ಯಾಯಾಲಯದ ಸದಸ್ಯರಲ್ಲದ ಕಾರಣ ಬಂಧನ ವಾರೆಂಟ್ ನ ಪ್ರಾಯೋಗಿಕ ಪರಿಣಾಮಗಳು ಸೀಮಿತವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ನೆತನ್ಯಾಹು ಮತ್ತು ಇತರ ಇಸ್ರೇಲಿ ನಾಯಕರು ICC ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರ ವಾರಂಟ್ಗಳ ವಿನಂತಿಯನ್ನು ಅವಮಾನಕರ ಮತ್ತು ಯೆಹೂದ್ಯ ವಿರೋಧಿ ಎಂದು ಖಂಡಿಸಿದ್ದಾರೆ.