- ಗೀತ ಗೋವಿಂದಂ ಬಳಿಕ ಪರಶುರಾಮ್ ಜೊತೆಗಿನ ವಿಜಯ್ ಎರಡನೇ ಚಿತ್ರ ಫ್ಯಾಮಿಲಿ ಸ್ಟಾರ್.
- ದೇವರಕೊಂಡ ನಟನೆಯ “ದಿ ಪ್ಯಾಮುಲಿ ಸ್ಟಾರ್ ” ಇದೀಗ ಹಿಂದಿಯಲ್ಲಿ ಸ್ಟ್ರೀಮ್ ಆಗಲಿದೆ.
ವಿಜಯ್ ದೇವರಕೊಂಡ ಅವರು ಜನಪ್ರಿಯ ನಟ. ತೆಲುಗು ಚಿತ್ರರಂಗದಲ್ಲಿ ಅವರ ನಟನೆ ಮೂಲಕ ಹೆಸರುವಾಸಿಯಾಗಿದ್ದಾರೆ. ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ “ಪೆಲ್ಲಿ ಚೂಪುಲು” ನಲ್ಲಿನ ಅವರ ಪಾತ್ರದೊಂದಿಗೆ ಅವರು ಖ್ಯಾತಿಯನ್ನು ಗಳಿಸಿದರು. “ಅರ್ಜುನ್ ರೆಡ್ಡಿ” ಸಿನಿಮಾದಲ್ಲಿ ಅವರ ಅಭಿನಯವು ಎಲ್ಲರ ಗಮನ ಸೆಳೆದು ಅವರ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು.
ಇದೀಗ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣದ ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದ . 2018 ರಲ್ಲಿ ಬಿಡುಗಡೆಯಾದ ಯಶಸ್ವಿ ಗೀತ ಗೋವಿಂದಂ ನಂತರ ಪರಶುರಾಮ್ ಜೊತೆಗಿನ ವಿಜಯ್ ಅವರ ಎರಡನೇ ಚಿತ್ರ ಫ್ಯಾಮಿಲಿ ಸ್ಟಾರ್.
ಪರಶುರಾಮ್ ಪೆಟ್ಲಾ ನಿರ್ದೇಶಿಸಿದ ವಿಜಯ್ ದೇವರಕೊಂಡ ನಟಿಸಿರುವ “ದಿ ಪ್ಯಾಮಿಲಿ ಸ್ಟಾರ್” ಚಿತ್ರವು ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಲನಚಿತ್ರ ರಸಿಕರಿಂದ ಮಿಶ್ರ ವಿಮರ್ಶೆಗಳಿಗೆ ದಾರಿಮಾಡಿಕೊಟ್ಟಿತ್ತು. ನಂತರದ ದಿನಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿತ್ತು. ಇದೀಗ ವಿಜಯ್ ದೇವರಕೊಂಡ ನಟಿಸಿರುವ “ದಿ ಪ್ಯಾಮಿಲಿ ಸ್ಟಾರ್ ” ಅತೀ ಶೀಘ್ರದಲ್ಲೇ ಹಿಂದಿ ಬಾಷೆಯಲ್ಲಿ ಸ್ಟ್ರೀಮ್ ಆಗಲಿದೆ. ವಿಜಯ್ ದೇವರಕೊಂಡ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.