ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಬಿಗ್ಬಾಸ್ ಮನೆಗೆ ಬಂದ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಿಗ್ಬಾಸ್ ನಿನ್ನೆಯ ಸಂಚಿಕೆಯಲ್ಲಿ ಕೊಟ್ಟ ಟಾಸ್ಕ್ ಮಧ್ಯೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಬಂದಿದ್ದ ರಜತ್ ಹಾಗೂ ಗೋಲ್ಡ್ ಸುರೇಶ್ ಗಲಾಟೆ ಮಾಡಿಕೊಂಡಿದ್ದರು.
ಈ ಘಟನೆ ಮರೆಯುವ ಮೊದಲೇ ಇತ್ತ ಶಿಶಿರ್ ಮತ್ತು ಚೈತ್ರಾ ನಡುವೆ ಕಿತ್ತಾಟ ನಡೆದಿದೆ. ಭವ್ಯಾ ಟೀಮ್ನವರು ಟಾಸ್ಕ್ ಆಡುವಾಗ ಯಡವಟ್ಟು ಮಾಡಿದ್ದಾರೆ. ಇದನ್ನು ಗಮನಿಸಿದ ಉಸ್ತುವಾರಿ ಶಿಶಿರ್ ಆಟದ ಬಗ್ಗೆ ಚಕಾರವೆತ್ತಿದ್ದಾರೆ. ಬಿಗ್ಬಾಸ್ ಎರಡು ತಂಡಗಳಿಗೆ ಟಾಸ್ಕ್ವೊಂಡನ್ನು ನೀಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿದ್ದ ಈ ಟಾಸ್ಕ್ನಲ್ಲಿ ಕೆಂಪು ತಂಡದಿಂದ ಮಂಜು, ರಜತ್ ಆಡಿದರೆ, ನೀಲಿ ಟೀಮ್ನಿಂದ ತ್ರಿವಿಕ್ರಮ್ ಮತ್ತು ಧರ್ಮ ಅವರು ಆಡುತ್ತಿದ್ದರು. ಇದೇ ವೇಳೆ ಶಿಶಿರ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಜೋರು ಗಲಾಟೆ ನಡೆದಿದೆ.
ಈ ವಿಚಾರವಾಗಿ ಶಿಶಿರ್ ಮತ್ತು ಚೈತ್ರಾ ನಡುವೆ ವಾಗ್ವಾದ ನಡೆದಿದೆ. ಸೋಲುತ್ತೇವೆ ಅಂತ ಭಯ ಇದ್ದಾಗ ಹೀಗೆ ಆಡೋದು ಅಂತ ಚೈತ್ರಾ ಕಿಡಿಕಾರಿದ್ದಾರೆ. ಆಗ ಶಿಶಿರ್ ಬರೀ ಮಾತು, ಅದು ಬಿಟ್ಟು ಬೇರೆ ಏನು ಇಲ್ಲ ಎಂದು ತಿರುಗೇಟು ನೀಡುತ್ತಾರೆ. ಆಗ ಚೈತ್ರಾ ಇದನ್ನೂ ಬಿಟ್ಟು ಬೇರೆ ಏನು ಹೇಳೋದಕ್ಕೆ ಬರುತ್ತೆ ನಿಮಗೆ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಆಗ ಸುಮ್ನೆ ಹೋಗು ಆ ಕಡೆ ಅಂತ ಶಿಶಿರ್ ಜೋರಾಗಿ ಕೂಗಾಡಿದ್ದಾರೆ. ನಂತರ ಚೈತ್ರಾ ನನಗೆ ಆ ಕಡೆ ಹೋಗು ಅಂತ ಹೇಳೋದಕ್ಕೆ ಯಾವ ಅಧಿಕಾರ ಕೂಡ ನಿಮಗಿಲ್ಲ. ಆ ಕಡೆ ಹೋಗೋದಿಲ್ಲ ಇಲ್ಲೇ ನಿಂತುಕೊಳ್ಳುತ್ತೇನೆ ತಾಕ್ ಇದ್ರೆ ತಡೀರಿ ನೋಡೋಣ ಅಂತ ಅವಾಜ್ ಹಾಕಿದ್ದಾರೆ.