ಹೊಸ ವರ್ಷವು ಹೊಸ ಶಕ್ತಿ, ಹೊಸ ಭರವಸೆ ಮತ್ತು ಅನೇಕ ಸಂತೋಷವನ್ನು ತರಲೆಂದು ವರ್ಷದ ಮೊದಲ ದಿನ, ನಾವು ದೇವಾಲಯಕ್ಕೆ ಹೋಗಿ, ಪೂಜೆ ಸಲ್ಲಿಸುತ್ತೇವೆ. ದೇವರ ಆರಾಧನೆಯೊಂದಿಗೆ ಕೆಲವು ವಿಶೇಷ ಕ್ರಮಗಳೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲಿರಲಿದೆ ಎಂದು ನಂಬಲಾಗಿದೆ. ಹಾಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಆದ್ದರಿಂದ ಹೊಸ ವರ್ಷ 2025ರಲ್ಲಿ ಸಂಪತ್ತು ಮತ್ತು ಸಂತೋಷದಿಂದ ತುಂಬಿದೆ ಜೀವನ ನಿಮ್ಮದಾಗಬೇಕೆಂದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ.
ಹೊಸ ವರ್ಷದ ಆರಂಭದಲ್ಲಿ, ಯಾವುದೇ ಜಗಳ, ವಿವಾದ, ಅಸೂಯೆ ಮತ್ತು ದುರುದ್ದೇಶದಿಂದ ನಿಮ್ಮನ್ನು ದೂರವಿಡಿ. ಅತಿಯಾಗಿ ಕೋಪದಿಂದ ದೂರವಿರಿ, ಇಲ್ಲದಿದ್ದರೆ ನೀವು ವರ್ಷವಿಡೀ ಪಶ್ಚಾತ್ತಾಪ ಪಡಬೇಕಾಗಬಹುದು. ಜಗಳವು ಕುಟುಂಬದಲ್ಲಿ ಅಪಶ್ರುತಿಯ ವಾತಾವರಣವನ್ನು ಸೃಷ್ಟಿಸುತ್ತದೆ, ಇದರಿಂದಾಗಿ ನಕಾರಾತ್ಮಕತೆ ಉಂಟಾಗುತ್ತದೆ.
ಬಹಳಷ್ಟು ಮಂದಿ ಹೊಸ ವರ್ಷದಂದೇ ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲಿ ಪ್ಲಾಸ್ಟಿಕ್, ಲೆದರ್ನಿಂದ ಮಾಡಲಾದ ವಸ್ತುಗಳನ್ನು ಈ ದಿನ ಮನೆಯೊಳಗೆ ತರುವುದು ಅಶುಭದ ಸಂಕೇತವಂತೆ. ಇದರ ಬದಲು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮವಂತೆ.
ತಡವಾಗಿ ಏಳುವುದು
ವರ್ಷದ ಆರಂಭಿಕ ದಿನದಂದೆ ತೀರಾ ತಡವಾಗಿ ಏಳುವುದು ಅಶುಭದ ಸಂಕೇತವಾಗಿರಲಿದೆ. ಜೊತೆಗೆ ಹೊಸ ವರ್ಷದಂದು ನಿತ್ಯ ಕೆಲಸಕ್ಕೆ ರಜೆ ಹಾಕುವುದು ಇಡೀ ದಿನ ಆಲಸಿಯಾಗಿ ಮಲಗಿರುವುದು ಅಶುಭಕ್ಕೆ ದಾರಿ ಮಾಡಿಕೊಟ್ಟಂತೆ.
ಪ್ರಾಣಿ ವಧೆ ಮತ್ತು ಮಾಂಸ ಸೇವನೆ
ವರ್ಷದ ಆರಂಭದ ದಿನದಲ್ಲಿ ಪ್ರಾಣಿ ವಧೆ ಮಾಡಿದರೆ ಪಾಪ ಸುತ್ತಿಕೊಳ್ಳಲಿದೆ ಎಂಬುದು ಶಾಸ್ತ್ರದ ತಿಳುವಳಿಯಾಗಿದೆ. ಮತ್ತು ಈ ದಿನ ಬಹಳಷ್ಟು ಮಂದಿ ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡುತ್ತಾರೆ ಇದು ಸಹ ಅಶುಭದ ಸಂಕೇತವಾಗಿದೆ. ಇದಕ್ಕಿಂತ ಹೊಸ ವರ್ಷದ ದಿನದಂದು ಸಿಹಿ ತಿಂಡಿ ಹಂಚಿ, ಹೊಸ ಬಟ್ಟೆ ತೊಟ್ಟು, ಸಾತ್ವಿಕ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಮನೆ ಸ್ವಚ್ಛಗೊಳಿಸುವುದು
ಹೊಸ ವರ್ಷದಂದೇ ಮನೆಯನ್ನು ತೊಳೆದು ಸ್ವಚ್ಛ ಮಾಡುವುದು ಸಹ ಅಶುಭವಂತೆ. ಇದಕ್ಕಿಂತ ವರ್ಷದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅಥವಾ ವರ್ಷದ ಆರಂಭಗೊಂಡು ಒಂದೆರಡು ದಿನದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ.
ಸಾಲ ಮಾಡಬೇಡಿ ಮತ್ತು ಕೊಡಬೇಡಿ
ಹೊಸ ವರ್ಷದಲ್ಲಿ ಯಾವುದೇ ರೀತಿಯ ಸಾಲದಿಂದ ನಿಮ್ಮನ್ನು ದೂರವಿಡಿ. ಸಾಲ ತೆಗೆದುಕೊಳ್ಳುವುದು ಯಾರಿಗೂ ಒಳ್ಳೆಯದಲ್ಲ, ಸಾಲವು ನಿಮಗೆ ವರ್ಷವಿಡೀ ತೊಂದರೆಯನ್ನುಂಟುಮಾಡುತ್ತದೆ, ಇದರಿಂದಾಗಿ ನೀವು ಮಾನಸಿಕ ಒತ್ತಡದಲ್ಲಿ ಉಳಿಯಬಹುದು. ಹೊಸ ವರ್ಷದಲ್ಲಿ ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ, ಯಾರಿಗೂ ಸಾಲ ಕೊಡಬೇಡಿ.
ಅಳುವ ಅಭ್ಯಾಸವನ್ನು ಬಿಟ್ಟುಬಿಡಿ
ಹೊಸ ವರ್ಷದಲ್ಲಿ ನೀವು ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಅನುಭವಿಸಲು ಬಯಸಿದರೆ, ನಂತರ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿ. ಕಿರಿಕಿರಿ ಮತ್ತು ಅಳುವ ಅಭ್ಯಾಸವನ್ನು ಬಿಟ್ಟುಬಿಡಿ. ಈ ಅಭ್ಯಾಸವಿರುವವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುವುದಿಲ್ಲ.