ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೊಸದೇನು ಅಲ್ಲ. ತೆಲುಗು, ತಮಿಳಿನ ಸ್ಟಾರ್ ನಟರ ಚಿತ್ರಗಳು ದೊಡ್ಡಮಟ್ಟದಲ್ಲೇ ಇಲ್ಲಿ ತೆರೆಗಪ್ಪಳಿಸುತ್ತವೆ. ಆದರೆ ಕೆಲವೊಮ್ಮೆ ಕನ್ನಡ ಸಿನಿಮಾಗಳನ್ನು ಮೀರಿಸಿ ಸ್ಕ್ರೀನ್ಗಳನ್ನು ಪಡೆದುಕೊಳ್ಳುತ್ತವೆ. ಈ ವಾರ ಕನ್ನಡದ ‘ಭೈರತಿ ರಣಗಲ್’ ಜೊತೆ ತಮಿಳಿನ ‘ಕಂಗುವ’ ಸಿನಿಮಾ ತೆರೆಗೆ ಬರಲಿದೆ.
ಶಿವ ನಿರ್ದೇಶನದಲ್ಲಿ ಸೂರ್ಯ ನಟನೆಯ ‘ಕಂಗುವ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಗುರುವಾರವೇ(ನವೆಂಬರ್ 14) ಕಂಗುವ ಆರ್ಭಟ ಶುರುವಾಗಲಿದೆ. ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಶುಕ್ರವಾರ(ನವೆಂಬರ್ 15) ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ‘ಕಂಗುವ’ ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ.
‘ಭೈರತಿ ರಣಗಲ್’
ಶಿವರಾಜ್ಕುಮಾರ್ ಅವರು ಮಾಸ್ ಅವತಾರಗಳ ಮೂಲಕ ಫೇಮಸ್ ಆಗಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ರ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಈ ಕಾರಣದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿದೆ. ಶಿವಣ್ಣ ಅವರು ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್ ಮೊದಲಾದವರು ನಟಿಸಿದ್ದಾರೆ. ‘ಗೀತಾ ಆರ್ಟ್ಸ್’ ಮೂಲಕ ಈ ಚಿತ್ರ ಸಿದ್ಧವಾಗಿದೆ. ಈ ಬ್ಯಾನರ್ ಅಡಿಯಲ್ಲಿ ಸಿದ್ಧವಾದ ಎರಡನೇ ಸಿನಿಮಾ ಇದು.
‘ಕಂಗುವಾ’
ಕಂಗುವ ಸಿನಿಮಾದಲ್ಲಿ ಸೂರ್ಯ ಅವರು ನಟಿಸಿದ್ದು, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ವಿಲನ್ ಪಾತ್ರ ಮಾಡಿದ್ದು, ದಿಶಾ ಪಟಾಣಿ ಚಿತ್ರದ ನಾಯಕಿ. ಶಿವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾ ಕೇಲವ 2ಡಿ ಮಾತ್ರವಲ್ಲದೆ, 3ಡಿಯಲ್ಲೂ ಲಭ್ಯವಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.
ತಮಿಳು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ರಾಜ್ಯಾದ್ಯಂತ ‘ಕಂಗುವ’ ಸಿನಿಮಾ ತೆರೆಗೆ ಬರ್ತಿದೆ. ಆದರೆ ‘ಭೈರತಿ ರಣಗಲ್’ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಹೆಚ್ಚು ಸ್ಕ್ರೀನ್ ಹಾಗೂ ಶೋಗಳು ತಮಿಳು ಚಿತ್ರಕ್ಕೆ ಸಿಕ್ಕಿರುವುದು ಗೊತ್ತಾಗುತ್ತಿದೆ. ಅದನ್ನು ಮೀರಿ ‘ಭೈರತಿ ರಣಗಲ್’ ಶೋಗಳನ್ನು ಗಿಟ್ಟಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ಇದನ್ನು ಓದಿ : ಚನ್ನಪಟ್ಟಣದ ಮಿನಿ ಯುದ್ಧದಲ್ಲಿ ಗೆಲ್ಲುವವರು ಯಾರು?
ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮೊದಲಿನ ಆದ್ಯತೆ ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.ಒಟ್ಟಾರೆ ಬಾಕ್ಸಾಫೀಸ್ನಲ್ಲಿ ‘ಭೈರತಿ ರಣಗಲ್’ ವರ್ಸಸ್ ‘ಕಂಗುವ’ ಫೈಟ್ ಜೋರಾಗಿ ಇರಲಿದೆ. ಯಾವ ಸಿನಿಮಾ ಗೆಲ್ಲುತ್ತದೆ ಕಾದು ನೋಡಬೇಕಿದೆ.