ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಇಂಡಿಯಾ ಕಂಪನಿಯು ಇನೋವಾ ಹೈಕ್ರಾಸ್ ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದೆ. ಹೊಸ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 20.99 ಲಕ್ಷ ಬೆಲೆ ಹೊಂದಿದೆ. ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಪಡೆದಿದ್ದು, ಇದು ಸುಮಾರು ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.
ಹೊಸದಾಗಿ ಬಿಡುಗಡೆಯಾದ ಜಿಎಕ್ಸ್(ಒ) ವೆರಿಯೆಂಟ್ ಇನೋವಾ ಹೈಕ್ರಾಸ್ ಕಾರಿನ ಪೆಟ್ರೋಲ್ ಆವೃತ್ತಿಯ ಟಾಪ್ ಎಂಡ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದೆ. ಇದು ಸಾಮಾನ್ಯ ಜಿಎಕ್ಸ್ ವೆರಿಯೆಂಟ್ಗಿಂತಲೂ ಹೆಚ್ಚು ಪ್ರೀಮಿಯಂ ಆಗಿರಲಿದೆ. ಹೊಸ ವೆರಿಯೆಂಟ್ನಲ್ಲಿ ಟೊಯೊಟಾ ಕಂಪನಿಯು ಜಿಎಕ್ಸ್ ವೆರಿಯೆಂಟ್ನಲ್ಲಿರುವ ವಿವಿಧ ಫೀಚರ್ಸ್ಗಳೊಂದಿಗೆ ಹೆಚ್ಚುವರಿಯಾಗಿ ಫ್ರಂಟ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಕ್ಯಾಮೇರಾ ಮತ್ತು ಆಟೋಮ್ಯಾಟಿಕ್ ಕಂಟ್ರೋಲ್ ಸಿಸ್ಟಂ ಪಡೆದಿದೆ.
ಹೊಸ ವೆರಿಯೆಂಟ್ನಲ್ಲಿ ಫ್ರಂಟ್ ಎಲ್ಇಡಿ ಫಾಗ್ ಲೈಟ್ಸ್, ರಿಯರ್ ಡಿಫಾಗರ್ ಸೇರಿದಂತೆ ಒಳಭಾಗದಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್, ಡೋರ್ಸ್, 10.1 ಇಂಚಿನ ಇನ್ಪೋಟೈನ್ ಮೆಂಟ್ ಟಚ್ ಸ್ಕ್ರೀನ್, ವೈಯರ್ ಲೆಸ್ ಆ್ಯಪಲ್ ಕಾರ್ ಪ್ಲೇ ಮತ್ತು ಅರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಫ್ರ್ಯಾಬಿಕ್ ಸೀಟ್ ಕವರ್ಗಳನ್ನು ನೀಡಲಾಗಿದೆ.