ಬಿಗ್ಬಾಸ್ ಮನೆ ಇದೀಗ ಬಿಗ್ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಶುರುವಾಗಿದೆ. ಪರಿಣಾಮ ಸಮ್ರಾಜ್ಯದ ಪ್ರಜೆಗಳೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ!
ಬಿಗ್ಬಾಸ್ ಮನೆಯಲ್ಲಿ ಹೊಸ ಆಟ ಶುರುವಾಗಿದೆ. ಈ ವಾರ ಕ್ಯಾಪ್ಟನ್ ಆಗಿರುವ ಮಂಜು ಬಿಗ್ ಸಾಮ್ರಾಜ್ಯದ ರಾಜ ಎಂದು ಘೋಷಣೆಯಾಗಿದೆ. ಅಂತೆಯೇ ರಾಜ ಮಂಜು ರಾಜಾಡಳಿತ ಮಾಡ್ತಿದ್ದಾರೆ. ತಪ್ಪು ಮಾಡಿದವಿಗೆ ಕಠಿಣ ಶಿಕ್ಷೆ ಆಗ್ತಿದೆ. ಪ್ರಜೆಗಳೆಲ್ಲರೂ ಜೋರಾಗಿ ಉಸಿರಾಡುವುದಕ್ಕೂ ಭಯ ಪಡುತ್ತಿದ್ದಾರೆ.
ರಿಲೀಸ್ ಆಗಿರೋ ಪ್ರಮೋದಲ್ಲಿ ತಪ್ಪು ಮಾಡಿದ ಚೈತ್ರಾ ಕುಂದಾಪುರ ಅವರ ಬಾಯಿಗೆ ಮತನಾಡಲು ಸಾಧ್ಯವಾಗದ ರೀತಿಯಲ್ಲಿ ಆಲೂಗಡ್ಡೆ ಹಾಕುವಂತೆ ರಾಜ ಆದೇಶ ನೀಡಿದ್ದಾನೆ. ಇನ್ನೂ ಕೆಲವರಿಗೆ 50ಕ್ಕೂ ಹೆಚ್ಚು ಬಸ್ಕಿಯನ್ನು ತೆಗೆಸಿದ್ದಾರೆ. ಇದರ ನಡುವೆ ಧನರಾಜ್ ಅವರು ರಾಜನ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಎಂದಿನಂತೆ ಆಪ್ತ ಗೆಳೆಯ ಹನುಮಂತನ ಬಳಿ ಗಾರ್ಡನ್ ಏರಿಯಾಗೆ ಬಂದು ರಾಜನ ವಿರುದ್ಧ ಮಸಲತ್ತು ಮಾಡಿದ್ದಾರೆ. ಏನ್ ಅನ್ಕೊಂಡಿದ್ದಾರೆ? ಅವರು ಹೇಳಿದ್ದೆಲ್ಲ ಅನಿಸಿಕೊಳ್ಳೋಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇಂದು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದ್ದು, ಮಂಜು ಯಾವ ರೀತಿ ದರ್ಬಾರ್ ನಡೆಸಿದ್ದಾರೆ ಅನ್ನೋದು ಗೊತ್ತಾಗಲಿದೆ.