‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ಜೋಡಿ ಟಾಸ್ಕ್ ಚಾಲ್ತಿಯಲ್ಲಿದೆ. ಜೋಡಿಗಳಿಗೆ ತಮಗೆ ಮೀಸಲಿರುವ ಕೆಸರನ್ನ ಕಾಪಾಡಿಕೊಳ್ಳುವ, ಇತರೆ ಜೋಡಿಗಳ ಕೆಸರನ್ನು ಹಾಳು ಮಾಡುವ ಚಟುವಟಿಕೆಯನ್ನು ‘ಬಿಗ್ ಬಾಸ್’ ನೀಡಿದ್ದಾರೆ. ಎಲ್ಲಾ ಜೋಡಿಗಳ ಬಳಿ ಇರುವ ಕೆಸರನ್ನು ಹಾಳು ಮಾಡಲು ಮಂಜು ಮುಂದೆ ಬಂದಿದ್ದಾರೆ. ಮಂಜು ಎದುರು ಗೋಲ್ಡ್ ಸುರೇಶ್ ತೊಡೆ ತಟ್ಟಿ ನಿಂತಿದ್ದಾರೆ.
ಇದರಿಂದ ಅನುಷಾ ನಾವು ಮಾತ್ರ ಕಣ್ಣಿಗೆ ಕಾಣಿಸುತ್ತಿದ್ದೀವಾ ಬೇರೆ ಯಾರೂ ಕಾಣಿಸೋದಿಲ್ವಾ ಎಂದು ಮಂಜುಗೆ ಅನುಷಾ ಪ್ರಶ್ನೆ ಮಾಡಿದ್ದಾರೆ. ಜಿದ್ದಾಜಿದ್ದಿಯಿಂದ ಈ ಆಟವನ್ನ ಆಡಿರುವ ಉಗ್ರಂ ಮಂಜು ‘’ಯಾರೂ ಉಳಿಯಲ್ಲ, ನೋಡೇಬಿಡೋಣ’’ ಅಂತ ಓಪನ್ ಚಾಲೆಂಜ್ ಸಹ ಹಾಕಿದ್ದಾರೆ. ಉಗ್ರಂ ಮಂಜು ಮೊದಲೇ ತುಂಬಾ ಅಗ್ರೆಸ್ಸಿವಾಗಿ ಆಟ ಆಡುತ್ತಾರೆ . ಯಾರೆಲ್ಲ ಇವತ್ತು ಜಗಳಾ ಮಾಡುತ್ತಾರೋ?, ಯಾರೆಲ್ಲ ಈ ಕೆಸರಿನ ಆಟದಿಂದ ನೋವು ಮಾಡಿಕೊಳ್ಳುತ್ತಾರೋ ಇಂದಿನ ಸಂಚಿಕೆಯಲ್ಲಿ ಕಾದುನೋದಬೇಕಿದೆ.