ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಪಕ್ಷವೊಂದು ಪುರುಷರ ಹಕ್ಕುಗಳಿಗಾಗಿ ಲೋಕಸಭೆ ಅಖಾಡಕ್ಕೆ ಇಳಿಯಲು ಸಿದ್ದವಾಗಿ ನಿಂತಿದೆ, ಮೇರಾ ಅಧಿಕಾರ್ ರಾಷ್ಟ್ರೀಯ ದಳ (MARD) ಎನ್ನುವ ಪಕ್ಷ, ಪುರುಷರ ರಕ್ಷಣೆ ಮತ್ತು ಪುರಷರ ಹಕ್ಕಿಗಾಗಿ ನಾವು ಶ್ರಮಿಸುತ್ತೇವೆ ಎಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ರೆಡಿ ಆಗಿದೆ.
ಈ ಪ್ರಾದೇಶಿಕ ಪಕ್ಷ ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಮಹಿಳಾ ರಕ್ಷಣೆಗಾಗಿರುವ ಕೌಟುಂಬಿಕ ಹಿಂಸಾಚಾರದಂತಹ ಕಾಯ್ದೆಗಳ ಕಾನೂನಿನಡಿಯಲ್ಲಿ ಸಿಲುಕಿ ಹಾಕಿಕೊಂಡ ಪುರುಷರಿಗಾಗಿ ಹೋರಾಡುತ್ತಿದೆ. 2009ರಲ್ಲಿ ಆರಂಭವಾದ ಈ ಪಕ್ಷ , ಇಲ್ಲಿಯವರೆಗೆ 9 ಚುನಾವಣೆಗಳನ್ನು ಎದುರಿಸಿದೆ. ಈ ಹಿಂದೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳಲು ವಿಫಲರಾದರೂ, ವಿಚಲಿತರಾಗದೆ 2024 ರ ಲೋಕಸಭೆ ಚುನಾವಣೆಯಲ್ಲಿ ಲಕ್ನೋ,ರಾಂಚಿ ,ಗೋರಖಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.