ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂತ್ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಬಂದ ವೇಗದಲ್ಲೇ ಬ್ರೇಕಪ್ ಎನ್ನುವ ಬ್ರೇಕಿಂಗ್ ನ್ಯೂಸೂ ಬಂತು. ಆಗಾಗ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಟಾಂಗ್ ಕೊಡುವ ಪೋಸ್ಟ್ಗಳನೂ ಮಾಡುತ್ತಿದ್ದರು.ಈಗ ರಿಷಬ್ ನಂತರ ಊರ್ವಶಿ ಮತ್ತೆ ಸ್ಟಾರ್ ಆಟಗಾರನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಶುರುವಾಗಿದ್ದು, ಖ್ಯಾತ ಫ್ರೆಂಚ್ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾ ಮತ್ತು ಊರ್ವಶಿ ರೌಟೇಲಾ ದುಬೈನಲ್ಲಿ ಓಡಾಡುತ್ತಿದ್ದಾರಂತೆ.
ಕರೀಮ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಸೌದಿ ಅರೇಬಿಯಾದ ಅಲ್ ಇತ್ತಿಹಾದ್ ಕ್ಲಬ್ ಗಾಗಿ ಆಡುತ್ತಾರೆ. ಅಲ್ ಇತ್ತಿಹಾದ್, ಕರೀಮ್ ಬೆಂಜೆಮಾಗೆ ಒಂದು ಸೀರಿಸ್ ಗೆ ಸುಮಾರು 1800 ಕೋಟಿ ಕೊಡ್ತಾರಂತೆ. ಅಂದರೆ, ಕರೀಮ್ ಬೆಂಜೆಮಾ ತಿಂಗಳಿಗೆ 148 ಕೋಟಿ ಸಂಪಾದಿಸುತ್ತಾರೆ. ಈಗ ಇವರ ಜೊತೆ ಊರ್ವಶಿ ಸುತ್ತಾಡುತ್ತಿರುವುದು ಸಖತ್ ಸುದ್ದಿ ಆಗ್ತಿದೆ.