ತೀವ್ರ ಹೃದಯಾಘಾತದಿಂದ ನಿಧನರಾದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ನಿನ್ನೆ ಮಧ್ಯರಾತ್ರಿ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿತು. ಆದರೆ ಅವರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರ ಕುಟುಂಬಸ್ಥರು ಪೆನ್ ಹಾಗೂ ಪೇಪರ್ ನೀಡಿದ್ದರು. ಆಗ ಅವರು ಕೊನೆಯ ಬಾರಿಗೆ ಕಾಫಿ ಅಂತ ಇಂಗ್ಲೀಷ್ ನಲ್ಲಿ ಬರೆದುಕೊಟ್ಟಿದ್ದಾರೆ. ಕಾಫಿ ಕೊಟ್ಟಾಗ ಕೇವಲ ಎರಡು ಗುಟುಕು ಮಾತ್ರ ಕುಡಿದರಂತೆ. ಆದರೆ ದುರಾದೃಷ್ಟವಶಾತ್ ಮಧ್ಯರಾತ್ರಿ 1.30 ಹೊತ್ತಿಗೆ ನಿಧನ ಹೊಂದಿದ್ದಾರೆ.