- ಸಿನಿಮಾದ ಮುಂದಿನ ಭವಿಷ್ಯ ಏನಾಗುತ್ತದೆಯೋ ಗೊತ್ತಿಲ್ಲ.
- ದರ್ಶನ್ ಅವರ ವಿವಾದದ ಬಗ್ಗೆ ಮಾತನಾಡುವುದಿಲ್ಲ.
ನಟ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ “ಡೆವಿಲ್” ಅರ್ಧಕ್ಕೆ ನಿಂತು ಹೋಗಿದೆ. ಈ ಸಿನಿಮಾ 30 % ಶೂಟಿಂಗ್ ಮುಗಿದಿದ್ದು, ಇನ್ನು 70% ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಇನ್ನೂ ಫೈಟ್ ಸೀಕ್ವೆನ್ಸ್ ಮಾಡಬೇಕಿದೆ. ಆದರೆ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.
ಈ ಸಿನಿಮಾದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ವಿನಯ್ ಅವರು ಸಂದರ್ಶನವೊಂದರಲ್ಲಿ ಡೆವಿಲ್ ಸಿನಿಮಾ ಬಗ್ಗೆ ಮಾತಾನಾಡುತ್ತಾ”ನನಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ನಾನೇ ಮುಖ್ಯ ಖಳನಾಯಕ ಪಾತ್ರದಲ್ಲಿದ್ದೆ. ಈಗ ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದು, ಸಿನಿಮಾದ ಮುಂದಿನ ಭವಿಷ್ಯ ಏನಾಗುತ್ತದೆಯೋ ಗೊತ್ತಿಲ್ಲ.
ನನಗೆ ಸಿಕ್ಕಿದ್ದ ಸೂಪರ್ ಮೂವಿ ಇದು. ನಾನು ಬಿಗ್ ಬಾಸ್ ನಿಂದ ಬಂದ ಬಳಿಕ ಈ ಸಿನಿಮಾ ನನಗೆ ಸಿಕ್ಕ ದೊಡ್ಡ ಅವಕಾಶ. ಈ ಸಿನಿಮಾ ಪರಿಚಯ ಹೇಗಾಯ್ತು ಎಂದರೆ ಪ್ರಕಾಶ್ ಅವರ ಜೊತೆ ಕೆಲಸ ಮಾಡಿದ್ದೆಒಂದಷ್ಟು ಧಾರವಾಹಿಗಳು ಮಾಡಿದ್ದೆ. ಪ್ರಕಾಶ್ ಅವರಿಗೆ ನನ್ನ ನಟನೆ ಬಗ್ಗೆ ಗೊತ್ತಿತ್ತು. “ಡೆವಿಲ್ ಸಿನಿಮಾದ ಖಳನಾಯಕನ ಪಾತ್ರವನ್ನು ವಿವರಿಸಿದರು ನಂತರ ನಾನು ಈ ಸಿನಿಮಾಗೆ ಒಪ್ಪಿಕೊಂಡೆ. ಇದರಿಂದ ನನಗೆ ಈ ಒಳ್ಳೆಯ ಅವಕಾಶ ಸಿಕ್ಕಿತು ಆದ್ರೆ ಈ ಸಿನಿಮಾದ ಮುಂದಿನ ಭವಿಷ್ಯ ಏನಾಗುತ್ತದೆಯೋ ಕಾದು ನೋಡಬೇಕಿದೆ.
ದರ್ಶನ್ ಅವರ ಈ ವಿವಾದದ ಬಗ್ಗೆ ಹಾಗೂ ಯಾರ ಬಗ್ಗೆಯೂ ಮಾತನಾಡಲು ಬಯಸುವುದಿಲ್ಲ. ನಾವು ಈ ಉದ್ಯಮಕ್ಕೆ ತಡವಾಗಿ ಬಂದಿರಬಹುದು ಆದರೇ, ಇದೇ ಇಂಡಸ್ಟ್ರೀನಲ್ಲಿ ಇದ್ದೇನೆ . ದರ್ಶನ್ ಅವರ ಬಗ್ಗೆ ಪ್ರಶ್ನೆ ಬಂದಾಗ ಹೇಳುವುದಾದರೆ, ಹೌದು ತಪ್ಪಾಗಿದೆ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.