ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವಂತ ಕೆಲವೊಂದು ದೃಶ್ಯಗಳು ಭಾರೀ ಚರ್ಚೆಗೆ ಗ್ರಾಸವಾಗಬಹುದು, ಹಾಗೆಯೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಈಗಂತೂ ಯುವ ಜನತೆ ಹಾಗೂ ಜನರು ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು, ಫನ್ನಿ ವಿಡಿಯೋ ಮಾಡುವುದು ಹಾಗೂ ಯಾವುದಾದರೂ ಒಂದು ವಿಷಯದ ಬಗ್ಗೆ ಪ್ರಶ್ನೆ ಕೇಳುವುದಂತೂ ಟ್ರೆಂಡ್ ಆಗಿದೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಅರೆಬರೆ ಬಟ್ಟೆ ತೊಟ್ಟು, ಮೈಕ್ ಹಿಡಿದು ದಾರಿಯಲ್ಲಿ ಹೋಗುವಂತ ಗಂಡಸರ ಬಳಿ ಬಂದು ಹೀಗೆ ಬಟ್ಟೆ ತೊಡುವುದು ನಮ್ಮ ಸಮಾಜದಲ್ಲಿ ಸುರಕ್ಷಿತವೇ? ಎಂಬ ಪ್ರಶ್ನೆಗಳನ್ನು ಕೇಳಿದ್ದಾಳೆ. ಈ ಯುವತಿಯ ಅವತಾರಕ್ಕೆ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅರೆಬರೆ ಬಟ್ಟೆ ತೊಟ್ಟು ಓಡಾಡಿದ್ರೆ ಯಾರು ಕೂಡಾ ಇಷ್ಟ ಪಡೊಲ್ಲ. ಅಂತದ್ರಲ್ಲಿ ಕೊಲ್ಕತ್ತಾದ ಮಾಡೆಲ್ ಹೇಮಶ್ರೀ ಭದ್ರ ಎಂಬಾಕೆ ಅರೆಬರೆ ಬಟ್ಟೆ ತೊಡುವುದು ಸಮಾಜದಲ್ಲಿ ಸುರಕ್ಷಿತವೇ ಎಂಬ ಅಭಿಪ್ರಾಯವನ್ನು ಕೇಳಲು ಸ್ವತಃ ತಾನೇ ಮುಜುಗರ ತರಿಸುವಂತಹ ಬಟ್ಟೆ ತೊಟ್ಟು, ಕೈಯಲ್ಲೊಂದು ಮೈಕ್ ಹಿಡಿದು ಬೀದಿಗಿಳಿದಿದ್ದಾಳೆ. ಈಕೆಯ ಅವತಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತ ಪೋಸ್ಟ್ ಒಂದನ್ನು ಜೈಕಿ ಯಾದವ್ ಎಂಬುವರು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದೆಲ್ಲಾ ನಡೆಯುತ್ತಿರುವುದು ಸಾರ್ವಜನಿಕ ಸ್ಥಳದಲ್ಲಿ, ಅಹಸ್ಯಕರ ರೀತಿಯ ಬಟ್ಟೆ ಧರಿಸಿ ಎಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದಾಳೆ. ಇಂತಹ ವೈರಸ್ ಕೂಡಾ ವೇಗವಾಗಿ ಹರಡುತ್ತಿದ್ದು, ನಮ್ಮ ಸರ್ಕಾರ ಇಂತಹ ವೈರಸ್ಗಳನ್ನು ಕೊಲ್ಲಲು ಲಸಿಕೆಗಳ ವ್ಯವಸ್ಥೆ ಮಾಡಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ನವೆಂಬರ್ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 9.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾಚಿಕೆಗೇಡಿನ ವರ್ತನೆ ಈಕೆಯದ್ದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾರ್ವಜನಿಕ ಸ್ಥಳದಲ್ಲಿ ಹೀಗೆ ಲಜ್ಜೆಗೆಟ್ಟು ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದಾರೆ.