ಎಣ್ಣೆ (Alcohol) ಪ್ರಿಯರಿಗೆ ಕುಡಿಯೋ ಮುನ್ನ ಒಂದೆರಡು ಹನಿ ಮದ್ಯವನ್ನು ನೆಲದ ಮೇಲೆ ಚಿಮುಕಿಸುವ ಸಂಪ್ರದಾಯವನ್ನು ಅನುಸರಿಸುವುದು ಸಾಮಾನ್ಯ. ಆದರೆ ವಿದೇಶಗಳಲ್ಲಿ ಕುಡುಕರು ಗ್ಲಾಸ್‌ಗಳನ್ನು ಹಿಡಿದು ಚಿಯರ್ಸ್ ಮಾಡಿ (Cheers) ಮದ್ಯ ಸೇವನೆ ಮಾಡುತ್ತಾರೆ. ಆದರೆ ಭಾರತದಲ್ಲಿ, ವಿಶೇಷವಾಗಿ ಕುಡುಕರ ನಡುವೆ, ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಚಿಮುಕಿಸುವ ಪದ್ಧತಿ ಬಹಳಷ್ಟು ಪ್ರಸಿದ್ಧವಾಗಿದೆ. ಈ ಪದ್ಧತಿಯ ಹಿಂದಿನ ಮೂಲ ಹಾಗೂ ಅದರ ಕಾರಣ ಏನು? ಎಂದು ತಿಳಿಯಿರಿ.
ಈ ಪದ್ಧತಿಯ ಹಿಂದಿನ ಧಾರ್ಮಿಕ ಮತ್ತು ಪರಂಪರ ನಂಬಿಕೆಗಳು
ಹೆಚ್ಚಿನ ಭಾರತೀಯರು ಮದ್ಯ ಸೇವಿಸುವ ಮೊದಲು ಎರಡು ಹನಿ ಮದ್ಯವನ್ನು ನೆಲಕ್ಕೆ ಚಿಮುಕಿಸುವುದನ್ನು ಪೂರ್ವಜರಿಗೆ ಸಮರ್ಪಣೆ (Offering to ancestors) ಎಂದು ಭಾವಿಸುತ್ತಾರೆ. ಇದು ನಮ್ಮ ಪ್ರೀತಿಪಾತ್ರ ಪೂರ್ವಜರ ಆತ್ಮಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ, ಪಿಂಡಪ್ರದಾನ ಮಾಡುವ ಮೂಲಕ ಪೂರ್ವಜರ ಆತ್ಮಗಳಿಗೆ ತೃಪ್ತಿಯನ್ನು ಒದಗಿಸುವ ಸಂಪ್ರದಾಯವಿದೆ. ಅದೇ ರೀತಿಯ ಭಾವನೆಯಿಂದ, ಕೆಲವರು ಮದ್ಯ ಸೇವನೆ ಮಾಡುವ ಮುನ್ನ ಈ ವಿಧಿಯನ್ನು ಅನುಸರಿಸುತ್ತಾರೆ.
ಜ್ಯೋತಿಷ್ಯದ ಪ್ರಕಾರ ಶನಿಯ ಪ್ರಭಾವ ಕಡಿಮೆಯಾಗುತ್ತದೆ
ಜ್ಯೋತಿಷ್ಯದ ಪ್ರಕಾರ, ಮದ್ಯವನ್ನು ನೆಲಕ್ಕೆ ಚಿಮುಕಿಸುವುದು ಶನಿದೇವನ (Shani Dev) ಪ್ರಭಾವವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅನುರಾಗ್ ರಾಣಾ (Anurag Thakur) ಎಂಬುವವರು ಅವರ ಪ್ರಕಾರ, ಕುಡಿಯುವ ಮೊದಲು ಒಂದು ಹನಿ ಎಣ್ಣೆಯನ್ನು ನೆಲಕ್ಕೆ ಚಿಮುಕಿಸುವುದರಿಂದ ಶನಿದೋಷ (Shani Dosha) ಕಡಿಮೆಯಾಗುತ್ತದೆ. ಶನಿಯ ಪ್ರಭಾವವು ಜೀವನದಲ್ಲಿ ಅನೇಕ ಅಡಚಣೆಗಳನ್ನು, ಹಣಕಾಸು ತೊಂದರೆಗಳನ್ನು, ಮತ್ತು ದಾಂಪತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. ಹೀಗಾಗಿ, ಈ ತಂತ್ರವನ್ನು ಅನುಸರಿಸುವ ಮೂಲಕ ಶನಿಯ ಕೃಪೆಯನ್ನು ಪಡೆಯಬಹುದು ಎಂಬ ನಂಬಿಕೆ ಇದೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮದ್ಯ ಚಿಮುಕಿಸುವ ವೈಜ್ಞಾನಿಕ ಕಾರಣ
ಕೇವಲ ಧಾರ್ಮಿಕ ಅಥವಾ ಜ್ಯೋತಿಷ್ಯದ ನಂಬಿಕೆಗಳಷ್ಟೇ ಅಲ್ಲ, ಈ ಪದ್ಧತಿಯ ಹಿಂದಿನ ವೈಜ್ಞಾನಿಕ ಕಾರಣವನ್ನು ಪರಿಗಣಿಸಬಹುದು. ಇತರರನ್ನು ಪರಿಗಣಿಸದೇ ತಕ್ಷಣ ಕುಡಿಯಲು ಆರಂಭಿಸುವ ಬದಲು, ಒಂದೆರಡು ಹನಿ ನೆಲಕ್ಕೆ ಸುರಿಸುವುದು ಒಂದು ಬಗೆಯ ಕೃತಜ್ಞತೆ ಸಲ್ಲಿಸಿದಂತಾಗಬಹುದಾಗಿದೆ. ಇದು ಮಾನಸಿಕ ತೃಪ್ತಿಯನ್ನು ನೀಡಬಹುದು ಮತ್ತು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಬಹುದು.
ಸಾಮಾಜಿಕ ಅರ್ಥ ಮತ್ತು ಪರಂಪರೆ
ಭಾರತದಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳು ಮತ್ತು ಪರಂಪರೆಗಳಿವೆ. ಕೆಲವು ಹಳ್ಳಿ ಮತ್ತು ಜನಪದ ಸಂಸ್ಕೃತಿಗಳಲ್ಲಿ, ಮದ್ಯವನ್ನು ನೆಲಕ್ಕೆ ಸುರಿಸುವುದರಿಂದ ಮನೆಗೆ ಬರುವ ದುಷ್ಟ ಶಕ್ತಿಗಳು (Negative energy) ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಇದನ್ನು ಶುದ್ಧೀಕರಣದ ಕ್ರಮವನ್ನಾಗಿ (Purification Ritual) ಪರಿಗಣಿಸಲಾಗುತ್ತದೆ.
ನೀವು ಈ ಪದ್ಧತಿಯನ್ನು ಅನುಸರಿಸಬೇಕೇ?
ಈ ಪದ್ಧತಿಯನ್ನು ಅನುಸರಿಸುವುದು ಸಂಪೂರ್ಣವಾಗಿ ವ್ಯಕ್ತಿಯ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಮದ್ಯ ಸೇವನೆಗೆ ಸಂಬಂಧಿಸಿದ ಯಾವುದೇ ಸಂಪ್ರದಾಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ಅಭ್ಯಾಸವು ಉತ್ತಮ.