ಒಂದು ನವದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ಆಭರಣಗಳನ್ನು ತೆಗೆಯುವ ದೃಶ್ಯವಿದ್ದು, ಕೆಲವರು ಇದನ್ನು ಖಂಡಿಸಿದ್ದಾರೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಇದೀಗ ಮದುವೆ ಸೀಸನ್ ಆರಂಭವಾಗಿದೆ. ಅದರಲ್ಲೂ ಈ ಏಪ್ರಿಲ್, ಮೇ ತಿಂಗಳು ಮದುವೆಗಳ ಪರ್ವ ಎಂದು ಹೇಳಬಹುದು. ಆದ್ದರಿಂದ ಮದುವೆ ಸಂಬಂಧಿಸಿದ ಎಲ್ಲ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ. ಜೊತೆಗೆ, ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೀಕ್ಷಣೆ, ಶೇರ್ ಮತ್ತು ಕಾಮೆಂಟ್‌ಗಳನ್ನು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲೊಂದು ಜೋಡಿ ಮದುವೆ ಮುಗಿದ ನಂತರ ಮೊದಲ ರಾತ್ರಿ ಶಾಸ್ತ್ರವನ್ನು ಹೇಗೆ ಮಾಡಬೇಕು ನೋಡಿಕೊಳ್ಳಿ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Puri Unboxing post karna tha 🤐 pic.twitter.com/i40KupAEwk
— Berlin (Parody) (@Toxicity_______) November 27, 2023
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಎಲ್ಲರ ಜೀವನದ ಮೇಲೂ ಭಾರೀ ಪರಿಣಾಮವನ್ನು ಬೀರಿದೆ. ತಮ್ಮ ಜೀವನದ ಎಲ್ಲ ಘಟನೆಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ತಿನ್ನುವುದರಿಂದ ಹಿಡದು ರಾತ್ರಿ ಮಲಗುವವರೆಗೂ ಅಪ್ಡೇಟ್ ಮಾಡುತ್ತಾರೆ.
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಅತ್ಯಂತ ಸುಮಧುರ ಹಾಗೂ ಪ್ರಮುಖ ಕ್ಷಣವಾಗಿರುತ್ತದೆ. ಆದ್ದರಿಮದ ಮದುವೆಯ ಕೆಲವು ಕ್ಷಣಗಳನ್ನು ತಮ್ಮ ಆಪ್ತರು ಹಾಗೂ ಇತರರಿಗೆ ಹಂಚಿಕೊಳ್ಳುವುದರಿಂದ ನವ ದಂಪತಿ ಸಂತೋಷವನ್ನು ಅನುಭವಿಸುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ಮದುವೆ ಶಾಸ್ತ್ರದ ಪ್ರತಿಯೊಂದು ಘಟನೆಯ ವಿಡಿಯೋವನ್ನು ಸುಂದರ ಕ್ಷಣಗಳೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದಾದ ನಂತರ ಫಸ್ಟ್ ನೈಟ್ ಅನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಕೂಡ ವಿಡಿಯೋ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾರೆ.
ಮದುವೆ ಮಾಡಿಕೊಂಡ ದಂಪತಿ ಎಲ್ಲ ಶಾಸ್ತ್ರಗಳನ್ನು ಎಲ್ಲ ಜನರೆದುರು ಮಾಡಿಕೊಂಡರೂ ಮೊದಲ ರಾತ್ರಿ ಶಾಸ್ತ್ರವನ್ನು ಆಚರಣೆ ಮಾಡುವುದಕ್ಕೆ ದಂಪತಿಗೆ ಖಾಸಗಿತನ ಎಂಬುದು ತುಂಬಾ ಅಗತ್ಯವಾಗಿರುತ್ತದೆ.
ಹೀಗಾಗಿ, ಪತಿ ಮತ್ತು ಪತ್ನಿಗಂತಲೇ ಖಾಸಗಿ ಕ್ಷಣಗಳನ್ನು ಕಳೆಯಲು ಪ್ರತ್ಯೇಕ ಕೋಣೆಯನ್ನೂ ಕೂಡ ನೀಡಲಾಗುತ್ತದೆ. ಮೊದಲ ರಾತ್ರಿ ಎನ್ನುವುದು ತುಂಬಾ ಖಾಸಗಿ ವಿಚಾರವೆಂದು ಅದರ ಬಗ್ಗೆ ಯಾರ ಬಳಿಯೂ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಆದರೆ ಈ ನವದಂತಿ ತಮ್ಮ ಮದುವೆಯ ಫಸ್ಟ್ ನೈಟ್ ವೀಡಿಯೊವನ್ನು ನೇರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಕುರಿತ ಫೋಟೋ, ವಿಡಿಯೋಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಾರಣ ಇದೀಗ ಮದುವೆ ಸೀಸನ್ ಆರಂಭವಾಗಿದೆ. ಆದರೆ, ಇದೀಗ ಮದುವೆ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಫಸ್ಟ್ ನೈಟ್ ಮಾಡಿಕೊಳ್ಳಲು ಕೋಣೆಗೆ ಬಂದಿದೆ. ಅಲ್ಲಿ ಯುವತಿ ಬಂಗಾರದ ಆಭರಣಗಳನ್ನು ಮೈತುಂಬಾ ಧರಿಸಿಕೊಂಡು, ಬೆಲೆ ಬಾಳುವ ಸೀರೆಯನ್ನು ಉಟ್ಟುಕೊಂಡು ಗಂಡನೊಂದಿಗೆ ರೊಮ್ಯಾನ್ಸ್ ಮಾಡುತ್ತಾಳೆ. ಇದಾದ ನಂತರ ಗಂಡ ತನ್ನ ಹೆಂಡತಿಯ ಒಂದೊಂದೇ ಆಭರಣಗಳನ್ನು ತೆಗೆಯಲು ಸಹಾಯ ಮಾಡುತ್ತಾನೆ.
ಕತ್ತಿನಲ್ಲಿದ್ದ ಸರಗಳು, ತಲೆಬೊಟ್ಟು, ಸೊಂಟದ ಡಾಬು, ಕೈಬಳೆಗಳು ಹೀಗೆ ಒಂದೊಂದೇ ಆಭರಣ ಕಳಚುತ್ತಾ ಹೋಗುತ್ತಾರೆ. ನಂತರ ಇನ್ನೇನು ಹೆಂಡತಿಯ ರವಿಕೆ ಬಿಚ್ಚಬೇಕು ಎನ್ನುವಷ್ಟರಲ್ಲಿ ವಿಡಿಯೋ ಕೊನೆಗೊಳ್ಳುತ್ತದೆ. ಪುಣ್ಯಕ್ಕೆ ಇಷ್ಟಕ್ಕೆ ನಿಲ್ಲಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನೆಟ್ಟಿಗರು ಹೇಳಿದ್ದಾರೆ.
ಸದ್ಯ ಈ ವಿಡಿಯೋವನ್ನು @Toxicity__ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋ ಹಳೆಯ ವಿಡಿಯೋ ಆಗಿದ್ದು, ಮದುವೆ ಸೀಸನ್ ಆರಂಭವಾಗಿರುವ ಹಿನ್ನೆಲೆಯಲ್ಲು ಪುನಃ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ಕೆಲವರು ಫಸ್ಟ್ ನೈಟ್ ವಿಡಿಯೋವನ್ನು ನೋಡಿ ಸಂತಪಟ್ಟಿದ್ದಾರೆ. ಆದರೆ, ಸಂಪ್ರದಾಯಸ್ಥ ಹಿನ್ನೆಲೆಯುಳ್ಳವರಿಗೆ ಹಾಗೂ ಮೊದಲ ರಾತ್ರಿಯ ಗೌಪ್ಯತೆ ಕಾಪಾಡಬೇಕು ಎನ್ನುವ ಮನಸ್ಥಿತಿ ಉಳ್ಳವರಿಗೆ ಈ ವಿಡಿಯೋ ಇಷ್ಟವಾಗಿಲ್ಲ.
ಇನ್ನು ಮದುವೆ ಮತ್ತು ಮೊದಲ ರಾತ್ರಿ ಪರಿಕಲ್ಪನೆ ಇಲ್ಲದಿರುವ ಮಕ್ಕಳ ಮನಸ್ಸಿನ ಮೇಲೆ ಹಾಗೂ ಹದಿಹರೆಯದ ಮಕ್ಕಳ ಮೇಲೆ ಇಂತಹ ವಿಡಿಯೋಗಳು ಕೆಟ್ಟ ಪರಿಣಾಮ ಬೀರುತ್ತವೆ ಎಂದು ಕೆಲವರು ಕಿಡಿಕಾರಿದ್ದಾರೆ.