ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದ್ದು, ವಿವಾಹಿತರೂ ಕೂಡ ಅಕ್ರಮ ಸಂಬಂಧಗಳಲ್ಲಿ ತೊಡಗಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ವಿವಾಹಿತ ಮಹಿಳೆಯೊಬ್ಬಳನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ ಪ್ರಿಯಕರ, ಟ್ರಂಕ್‌ನಲ್ಲಿ ಅಡಗಿದ್ದ ವೇಳೆ ಕುಟುಂಬಸ್ಥರ ಕೈಗೆ ಸಿಕ್ಕಿ, ಅರೆನಗ್ನ ಸ್ಥಿತಿಯಲ್ಲಿ ಥಳಿತಕ್ಕೊಳಗಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವಿವಿಧ ಕಾಮೆಂಟ್‌ಗಳ ಸುರಿಮಳೆಗೊಳಗಾಗಿದೆ.
ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಭೇಟಿಯಾಗಲು ರಾತ್ರಿಯ ವೇಳೆ ಮನೆಯ ಗೋಡೆಯನ್ನು ಹಾರಿ ಒಳನುಗ್ಗಿದ್ದಾನೆ. ಕೋಣೆಯಲ್ಲಿ ಯಾರೋ ಮಾತನಾಡುವ ಶಬ್ದ ಕೇಳಿದಾಗ, ಮಹಿಳೆಯ ಅತ್ತೆ-ಮಾವನಿಗೆ ಅನುಮಾನ ಮೂಡಿತು. ಅವರು ಕೋಣೆಗೆ ಪ್ರವೇಶಿಸಿ ಪರಿಶೀಲನೆ ನಡೆಸಿದಾಗ, ಮೊದಲಿಗೆ ಯಾರೂ ಕಾಣಲಿಲ್ಲ. ಆದರೆ, ಟ್ರಂಕ್ ತೆರೆದಾಗ, ಮಹಿಳೆಯ ಪ್ರಿಯಕರ ಅರೆನಗ್ನ ಸ್ಥಿತಿಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿತು. ಕೋಪಗೊಂಡ ಕುಟುಂಬಸ್ಥರು ಆತನಿಗೆ ಕೋಲಿನಿಂದ ಥಳಿಸಿದ್ದು, ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
आगरा में अपनी शादीशुदा प्रेमिका से मिलने पहुंचा युवकl
परिवार के लोगों को देखकर नंगी हालत में संदूक में घुस बैठाl
बाद में पकड़ कर उसकी पिटाई की गई l pic.twitter.com/PuTpxH7wLh
— Pravesh Pal (@pal_pravesh) April 22, 2025
@pal pravesh ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ, ಟ್ರಂಕ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಕುಳಿತಿರುವ ವ್ಯಕ್ತಿಯನ್ನು ಕಾಣಬಹುದು. ಕುಟುಂಬಸ್ಥರು ಆತನಿಗೆ ಥಳಿಸುವಾಗ, ಆತ “ನನ್ನನ್ನು ಬಿಡಿ” ಎಂದು ಕರುಣಾಜನಕವಾಗಿ ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ. ಗದ್ದಲ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.
ವೈರಲ್ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, “ಈಗ ನಾನು ತಾಜ್‌ಮಹಲ್ ನೋಡಲು ಹೋಗುತ್ತೇನೆ,” ಎಂದು ತಮಾಷೆಯಾಗಿ ಬರೆದಿದ್ದಾರೆ. ಇನ್ನೊಬ್ಬರು, “ವಿವಾಹಿತ ಮಹಿಳೆಯ ಜೊತೆಗೆ ಇಂತಹ ಸಂಬಂಧ ಯಾಕೆ ಬೇಕಿತ್ತು? ಆತನಿಗೆ ಇಂತಹ ಶಿಕ್ಷೆ ಸರಿಯಾಗಿತ್ತು,” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, “ಈಗೀಗ ಗಂಡ-ಹೆಂಡತಿಯ ಸಂಬಂಧಕ್ಕೆ ಯಾವುದೇ ಬೆಲೆ ಇಲ್ಲ. ಇದರಿಂದ ಸಂಬಂಧಗಳಿಗೆ ಎಷ್ಟು ಮೌಲ್ಯ ಕೊಡುತ್ತೇವೆ ಎಂಬುದು ತಿಳಿಯುತ್ತದೆ,” ಎಂದು ಕಾಮೆಂಟ್ ಮಾಡಿದ್ದಾರೆ.