ಕೆಟ್ಟ ಗ್ಯಾಸ್ ಸ್ಟವ್‌ವನ್ನೇ ಶವರ್ ಆಗಿ ಪರಿವರ್ತಿಸಿದ ಜಾಣ: ವಿಡಿಯೋ ವೈರಲ್

123 (4)

ಪ್ರತಿಭೆಗಳು ಎಲ್ಲಿ ಹೇಗೆ ಕಾಣಸಿಗುತ್ತವೆ ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಲ್ಲೊಬ್ಬ ಆಸಾಮಿ ಹೊಸ ಪ್ರಯೋಗ ಮಾಡಿ ಸಖತ್ ವೈರಲ್ ಆಗಿದ್ದಾನೆ. ಹೌದು, ಮನೆಯಲ್ಲಿ ಕೆಟ್ಟು ಹೋದ ವಸ್ತುಗಳಿದ್ದರೆ ಅದರಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗ್ಯಾಸ್ ಸ್ಟವ್ ಅನ್ನು ಶವರ್ ಆಗಿ ಪರಿವರ್ತಿಸಿ, ಅದರಲ್ಲಿಯೇ ಸ್ನಾನ ಮಾಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗಿದ್ದು, ಈತನ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ.

 

ADVERTISEMENT
ADVERTISEMENT

ಕಟ್ಟಿಗೆ ಒಲೆಯಲ್ಲಿ ಅಡುಗೆ (cooking) ಮಾಡುವುದು ಕ್ರಮೇಣ ಕಡಿಮೆಯೇ ಆಗಿದೆ. ಹೀಗಾಗಿ ಎಲ್ಲರ ಮನೆಯಲ್ಲಿಯೂ ಗ್ಯಾಸ್ ಸ್ಟವ್ ಇದ್ದೆ ಇರುತ್ತದೆ. ಆದರೆ ಈ ಗ್ಯಾಸ್ ಸ್ಟವ್ ಕೆಟ್ಟು ಹೋದರೆ ರಿಪೇರಿ ಮಾಡಿಸಿ ಮರು ಬಳಕೆ ಮಾಡುತ್ತೇವೆ. ಮತ್ತೆ ಅದೇ ಸಮಸ್ಯೆಯಾದರೆ ಅದನ್ನು ಗುಜುರಿಗೆ ಹಾಕುತ್ತೇವೆ. ಆದರೆ ವ್ಯಕ್ತಿಯೊಬ್ಬನು ಕೆಟ್ಟು ಹೋದ ಗ್ಯಾಸ್ ಸ್ಟವ್ ಹೇಗೆ ಬಳಸಬೇಕೆಂದು ತೋರಿಸಿಕೊಟ್ಟಿದ್ದಾನೆ. ಹೌದು, ಈ ಗ್ಯಾಸ್ ಸ್ಟವನ್ನು ಶವರ್ ಆಗಿ ಬಳಸುತ್ತಿರುವ ವ್ಯಕ್ತಿಯ ವಿಡಿಯೋ ಸಖತ್ ವೈರಲ್ ಆಗಿದೆ.

@SingKinngSP ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವ್ಯಕ್ತಿಯೊಬ್ಬನು ಸ್ನಾನ ಮಾಡುತ್ತಿದ್ದಾನೆ. ಮೇಲಿಂದ ನೀರು ಬೀಳುತ್ತಿದ್ದು ನೀವೇನಾದ್ರೂ ಶವರ್ ಎಂದು ಭಾವಿಸಿದರೆ ನಿಮ್ಮ ಊಹೆ ನಿಜಕ್ಕೂ ತಪ್ಪಾಗುತ್ತದೆ. ಹೌದು, ಸ್ನಾನಗೃಹದ ಸೀಲಿಂಗ್‌ನಲ್ಲಿ ಶವರ್ ಬದಲಿಗೆ ಗ್ಯಾಸ್ ಸ್ಟೌವ್ ಅಳವಡಿಸಲಾಗಿದೆ. ನೀರಿನ ಪೈಪನ್ನು ಗ್ಯಾಸ್ ಸ್ಟೌವ್‌ಗೆ ಜೋಡಿಸಲಾಗಿದ್ದು, ಈ ನೀರು ಸ್ಟೌವ್ ಒಳಗಿಂದ ಸ್ಟೌವ್‌ನ ರಂಧ್ರಗಳ ಮೂಲಕ ಕೆಳಗೆ ಬೀಳುತ್ತಿದೆ. ಈ ವ್ಯಕ್ತಿಯೂ ಅದರ ಕೆಳಗೆ ಕುಳಿತುಕೊಂಡು ಸ್ನಾನ ಮಾಡುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವು ಈಗಾಗಲೇ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು, ಈ ರೀತಿ ಐಡಿಯಾಗಳು ತಿಳಿದಿರುವ ವ್ಯಕ್ತಿಗಳು ಭಾರತದಲ್ಲಿರಲು ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, ನಿಜಕ್ಕೂ ಈತನ ಬುದ್ಧಿವಂತಿಕೆ ಮೆಚ್ಚಿದೆ. ಗ್ಯಾಸ್ ಸ್ಟವ್ ಕೆಟ್ಟು ಹೋದರೆ ಅದನ್ನು ಎಸೆಯುವ ಬದಲು ಈ ರೀತಿ ಬಳಸುವೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊರ್ವ ಬಳಕೆದಾರರು, ‘ನಮ್ಮ ದೇಶದಲ್ಲಿ ಎಷ್ಟೊಂದು ಪ್ರತಿಭಾನ್ವಿತ ಜನರಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಅವಕಾಶ ನೀಡಿದರೆ ಅವರು ಪ್ರಪಂಚದಲ್ಲಿರುವ ವಿಜ್ಞಾನಿಗಳನ್ನು ಮೀರಿಸಿ ಎತ್ತರಕ್ಕೆ ಬೆಳೆಯುತ್ತಾರೆ’ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

     

    Exit mobile version