ಬೆಂಗಳೂರಿನ ಒಂದು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಬಣ್ಣದ ಬಾಂಬ್ ಸ್ಫೋಟವಾಗಿ ವಧು ಗಂಭೀರ ಗಾಯಗೊಂಡಿದ್ದಾರೆ. ಕೆನಡಾ ಮೂಲದ ವಧು ಮತ್ತು ಲಂಡನ್‌ನಲ್ಲಿ ನೆಲೆಸಿದ್ದ ವರರು ತಮ್ಮ ಮದುವೆಯ ವಿಶೇಷ ಕ್ಷಣಗಳನ್ನು ಕ್ಯಾಪ್ಚರ್ ಮಾಡಲು ಬಣ್ಣದ ಬಾಂಬ್‌ಗಳನ್ನು ಬಳಸಿದ್ದರಿಂದ ಈ ಅಪಘಾತ ಸಂಭವಿಸಿದೆ. ವೀಡಿಯೋದಲ್ಲಿ ವಧುವನ್ನು ಎತ್ತಿಕೊಂಡ ವರನ ಹಿಂದೆ ಬೆಂಕಿ ಕಿಡಿ ಸ್ಫೋಟಿಸಿ, ಅವರ ಬೆನ್ನಿನ ಮೇಲೆ ಬಿದ್ದು ಮದುವೆ ಬಟ್ಟೆ ಸುಟ್ಟುಹೋಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ viaparadiseಪೇಜ್‌ನಿಂದ ಹಂಚಲಾದ ಈ ವೀಡಿಯೋದಲ್ಲಿ, ಬಾಂಬ್ ಸ್ಫೋಟದಿಂದ ವಧು ನೋವಿನಲ್ಲಿ ಕಿರಚಿಕೊಳ್ಳುವ ದೃಶ್ಯ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ವಧು-ವರರ ಹೇಳಿಕೆ:
ಘಟನೆಯ ನಂತರ ವಧು ತನ್ನ ಸಾಮಾಜಿಕ ಮಾಧ್ಯವನ್ನು ಬಳಸಿ, “ಒಂದು ಅದ್ಭುತ ಶಾಟ್‌ಗಾಗಿ ಬಣ್ಣದ ಬಾಂಬ್‌ಗಳನ್ನು ಬಳಸಿದೆವು. ಆದರೆ ಅದು ನಮ್ಮ ಮೇಲೆ ಸಿಡಿದು, ನನ್ನ ಮದುವೆ ದಿನವೇ ಸುಟ್ಟಗಾಯಕ್ಕೆ ಕಾರಣವಾಯಿತು. ಇದು ‘ಇವಿಲ್ ಐ’ ಅಲ್ಲ, ಸುರಕ್ಷತೆಯ ಕಡೆಗಣಿಸಿದ್ದಕ್ಕೆ ಪರಿಣಾಮ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಮದುವೆ ಸಮಾರಂಭಗಳಲ್ಲಿ ಹೆಚ್ಚುತ್ತಿರುವ “ಸಿನಿಮಾಟಿಕ್ ಫೋಟೋಶೂಟ್‌ಗಳ” ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಪಟಾಕಿ, ಬಣ್ಣದ ಬಾಂಬ್‌ಗಳು, ಮತ್ತು ಇತರೆ ವಿಶೇಷ ಪರಿಣಾಮಗಳನ್ನು ಬಳಸುವಾಗ ವೃತ್ತಿಪರ ಮಾರ್ಗದರ್ಶನದ ಅಗತ್ಯ.