ಕೋಲ್ಕತ್ತಾ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಆರ್ಸಿಬಿ ವರ್ಸಸ್ ಕೆಕೆಆರ್ ಪಂದ್ಯದಲ್ಲಿ ತಪ್ಪಾದ ತೀರ್ಪಿಗೆ ವಿರಾಟ್ ಬಲಿಯಾದ್ರಾ ಎಂಬ ಚರ್ಚೆ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಕೆಆರ್ ಬರೋಬ್ಬರಿ 223 ರನ್ ಗುರಿ ನೀಡಿದೆ.ಈ ಬಿಗ್ ರನ್ ಮೊತ್ತವನ್ನ ಬೆನ್ನತ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕ್ ಎದುರಾಗಿದೆ.
ಸಖತ್ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಔಟ್ ಆಗಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಜೋಡಿ, ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಶುರು ಮಾಡಿದ್ರು. ಕೊಹ್ಲಿ ಕೇವಲ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 18 ರನ್ ಗಳಿಸಿ ಔಟ್ ಆದರು. ಆದರೆ ಈ ವೇಳೆ ಮೈದಾನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿ ಆಯ್ತು. ಹರ್ಷಿತ್ ರಾಣಾ ಎಸೆತ ಬಾಲ್ನಲ್ಲಿ ಕೊಹ್ಲಿ ಕ್ಯಾಚ್ ಕೊಟ್ಟರು. ಕೊಹ್ಲಿ ಹರ್ಷಿತ್ ರಾಣಾ ಎಸೆದದ್ದು ನೋ ಬಾಲ್ ಎಂದರು ಅಂಪೈರ್ ಕೇಳಲಿಲ್ಲ. ಬದಲಿಗೆ ಔಟ್ ನೀಡಿದ್ರು. ಬಳಿಕ ಕೊಹ್ಲಿ ಅಂಪೈರ್ ಬಳಿಗೆ ಹೋಗಿ ಜಗಳ ಮಾಡಿದ್ರು. ಒಟ್ನಲ್ಲಿ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿಯಾಗಿದ್ದಂತು ಸ್ಪಷ್ಟ.