Virat Kohli Retirement..!
Virat Kohli;ಕಿಂಗ್ ಕೊಹ್ಲಿ ರಿಟೈರ್ಮೆಂಟ್ ಕೊಡ್ತಾರಾ..? ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿಬಿಡ್ತಾರಾ? ಈ ರೀತಿಯ ಚರ್ಚೆಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಫಾರ್ಮಾಟ್ಗಳಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನವನ್ನ ನೀಡುತ್ತಲೇ ಬಂದಿದ್ದಾರೆ.ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ 117 ಟಿ20 ಪಂದ್ಯಗಳನ್ನಾಡಿದ್ದಾರೆ.
ಅದರಲ್ಲಿ 1 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 4037 ರನ್ ಕಲೆಹಾಕಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ 13 ಪಂದ್ಯಗಳನ್ನು ಆಡಿರುವ ಕಿಂಗ್ ಕೊಹ್ಲಿ 66.10 ರ ಸರಾಸರಿಯಲ್ಲಿ ಒಟ್ಟು 661 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಭರ್ಜರಿ ಶತಕವನ್ನು ಸಹ ಸಿಡಿಸಿದ್ದಾರೆ.
ಆದರೆ ಇತ್ತೀಚೆಗೆ ಟಿ20 ಯಲ್ಲಿ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಕೂಡ ಬಹಳಷ್ಟು ಚರ್ಚೆ ಆಗಿತ್ತು. ಈ ಬಾರಿಯ ಐಪಿಎಲ್ ನಲ್ಲ ಪ್ರಾರಂಭದಲ್ಲಿ ಆರ್ಸಿಬಿ ಪರವಾಗಿ ಹೆಚ್ಚು ರನ್ಗಳಿಸಿ ಆರೆಂಜ್ ಕ್ಯಾಪ್ ಗಳಿಸಿದ್ದರೂ ಕೂಡ ಸ್ಟ್ರೈಕ್ ರೇಟ್ ಅಷ್ಟೇನು ಇರಲಿಲ್ಲ. ಆದರೆ ವಿರಾಟ್ ಕೊಹ್ಲಿ ಅವರು ತಾವು ಗೇಮ್ನ ಸಿಚ್ಯುವೇಷನ್ಗೆ ತಕ್ಕಂತೆ ಆಟವಾಡ್ತಿದ್ದೇನೆ ಅನ್ನುವ ಉತ್ತರವನ್ನೂ ಸಹ ಕೊಟ್ಟಿದ್ದರು.
ಈಗ ಮತ್ತೆ ಟಿ20 ವಿಶ್ವಕಪ್ ನಂತರ ಕೊಹ್ಲಿ ಟಿ20 ಫಾರ್ಮಾಟ್ಗೆ ವಿದಾಯ ಹೇಳಿ, ಹೊಸ ಆಟಗಾರರಿಗೆ ಅವಕಾಶ ನೀಡಲಿದ್ದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಎಲ್ಲಾ ಗೊಂದಲಗಳಿಗೂ ಅವರೇ ಉತ್ತರ ಕೊಡಬೇಕಿದೆ.