- ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ
- ಪ್ರಯಾಣಿಕರ ಲಗೇಜ್ಗಳಲ್ಲಿ ಪರಿಶೀಲನೆ
- ಪೊಲೀಸರಿಂದ ಮುಂದುವರಿದ ಶೋಧಕಾರ್ಯ
ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ತಿರುವನಂತಪುರಂ-ಮುಂಬೈ ನಡುವೆ ಸಂಚರಿಸುವ ವಿಸ್ತಾರ ವಿಮಾನಕ್ಕೆ ಬೆದರಿಕೆ ಕರೆ ಬಂದಿದ್ದು, ಮೇಲ್ನೋಟಕ್ಕೆ ಭಯೋತ್ಪಾದಕರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಬಾಂಬ್ ಕರೆ ಬಂದ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಮಧ್ಯಾಹ್ನ 3.15ಕ್ಕೆ ಮುಂಬೈನಲ್ಲಿ ವಿಮಾನ ಲ್ಯಾಂಡ್ ಆಗಿದೆ. ಲ್ಯಾಂಡ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ. ಈ ಬಗ್ಗೆ ಪ್ರಯಾಣಿಕರಿಗೂ ವಿಷಯ ತಿಳಿಸಲಾಯಿತು. ಎಲ್ಲರ ಲಗೇಜ್ಗಳನ್ನ ಪರಿಶೀಲಿಸಲಾಗಿದೆ.
ಅದೃಷ್ಟಾವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸದೆ ಇದುದ್ದರಿಂದ, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.