ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಅವರು ನಿನ್ನೆಯಷ್ಟೇ ಕುಸಿದು ಬಿದ್ದಿದ್ದರು. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಬಿಗ್ ಬಾಸ್. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಚೈತ್ರಾ ಅವರು ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ. ಚೈತ್ರಾ ಹೊರಗಿನ ಅಭಿಪ್ರಾಯಗಳನ್ನು ಹೊತ್ತು ತಂದ್ರಾ? ಎನ್ನುವ ಅನುಮಾನ ನೆಟ್ಟಿಗರದ್ದು.
ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಮನೆಯಲ್ಲಿರವ ಸ್ಪರ್ಧಿಗಳಿಗೆ ಹೊರಗೆ ಹೋಗಿ ಬಂದವರಿಗೆ ಏನಾದ್ರು ಹೆಚ್ಚಿನ ಮಾಹಿತಿ ಗೊತ್ತಾಗಿದ್ಯಾ ಅನ್ನೋ ಕುತೂಹಲ ಇರುತ್ತೆ. ಹೀಗಾಗಿಯೇ ಚಿಕಿತ್ಸೆಗೆ ಹೋಗಿ ಬಂದ ಚೈತ್ರಾ ಕುಂದಾಪುರ ಅವರನ್ನ ಉಗ್ರಂ ಮಂಜು ಪ್ರಶ್ನಿಸಿದ್ದಾರೆ. ಬಿಗ್ ಬಾಸ್ ಮನೆ ಹೊರಗೆ ಜನರ ಅಭಿಪ್ರಾಯದ ಬಗ್ಗೆ ಉಗ್ರಂ ಮಂಜು, ಚೈತ್ರಾ ಅವರ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಚೈತ್ರಾ ಅವರು 3 ದಿನದಿಂದ ವಾತಾವರಣ ಕಂಪ್ಲೀಟ್ ಚೇಂಜ್ ಇದೆ ಅಂತೆ ಎಂದಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಈ ವಾತಾವರಣ ಹೇಗಿದೆ ಅಂತೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಚೈತ್ರಾ ಅವರು ಹೇಳಂಗಿಲ್ಲ ಎನ್ನುವ ಉತ್ತರ ನೀಡಿದ್ದಾರೆ.
ಮೂರು ದಿನದಿಂದ ವೆದರ್ ಕಂಪ್ಲೀಟ್ ಚೇಂಜ್ ಇರುತ್ತೆ. ರೆಕ್ಕೆ ಜಾಸ್ತಿ ಅಗಲ ಇದ್ಯಾ? ಮುಚ್ಚಿಕೊಂಡು ಬಿಟ್ಟಿದ್ಯಾ? ಎಂದು ಪರೋಕ್ಷವಾಗಿ ಉಗ್ರಂ ಮಂಜು ಅವರು ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು ಮುರಿದು ಹೋಗಿದೆ ಎಂದಿದ್ದಾರೆ. ಬಳಿಕ ಚೈತ್ರಾ ಅವರು ಮೈಕ್ ಸರಿಸಿ ಅಲ್ಲಲ್ಲಿ ಗುಸು ಗುಸು ಮಾತನಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಚೈತ್ರಾ ಪಿಸು ಮಾತಲ್ಲಿ ಮಾತನಾಡುವಂತಿಲ್ಲ ಎಂದು ಆದೇಶಿಸಿದ್ದಾರೆ. ಇದೀಗ ಈ ಪ್ರೋಮೋ ನೋಡಿ ಹೊರಗಿನ ವಿಚಾರ ಚೈತ್ರಾ ತಿಳಿದು ಬಂದಿರ ಬೇಕು ಎಂದು ಕಮೆಂಟ್ ಮಾಡಿದ್ದಾರೆ.