ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಧ್ಯೆ ಮಾತಿನ ಕಾಳಗ ಜೋರಾಗಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಅವರನ್ನು ಮಿಸ್ಟರ್ ಶಿವಕುಮಾರ್ ಅಂತ ತೆಗಳಿದ್ರು, ಈಗ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, “ಮಿಸ್ಟರ್” ಕುಮಾರಸ್ವಾಮಿ ಎಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಹೇಳಿಕೆ ವಿರುದ್ಧ ರಾಜ್ಯದ ಮಹಿಳೆಯರೆಲ್ಲ ತಿರುಗಿ ಬಿದ್ದ ಮೇಲೆ ಅವರಿಗೆ ಜ್ಞಾನೋದಯವಾಗಿದೆ. ಅದರೆ ಅವರು ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸೋದು ಬೇಡ, ಹಿಂದೆ ಹೇಳಿದಂತೆಯೇ ಈಗಲೂ ಎನ್ ಡಿಎ ಪಾರ್ಟ್ನರ್ ಗೆ ಸವಾಲು ಹಾಕುತ್ತೇನೆ, ನಮ್ಮಿಬ್ಬರ ಮಧ್ಯೆ ಬಹಿರಂಗ ಚರ್ಚೆ ನಡೆಯಲಿ, ನಾನು ಈ ಹಿಂದೆ ವಿಧಾನಸಭೆಯಲೂ ಚರ್ಚೆಗೆ ಕರೆದಿದ್ದೆ, ಆದರೆ ಅವರು ಬರಲಿಲ್ಲ, ಈಗ ಮತ್ತೆ ಸವಾಲು ಹಾಕುತ್ತಿದ್ದೇನೆ. ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮೀಡಿಯಾಗಳ ಮುಂದೆ ಡಿಬೇಟ್ ಆದ್ರೂ ಓಕೆ, ನಾನು ಬಹಿರಂಗ ಚರ್ಚೆಗೆ ಸದಾ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗಲು ಸಾಧ್ಯವೇ ಇಲ್ಲ. ಬಹಿರಂಗ ಚರ್ಚೆ ನಡೆದರೆ ಕುಮಾರಸ್ವಾಮಿ ಎಂಥಹ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಅಲ್ಲದೇ ಕುಮಾರಸ್ವಾಮಿಯವರೆ ನಾವು ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಗೆಲ್ಲಲ್ಲ ಅಂತ ಭವಿಷ್ಯ ನುಡಿದ್ರು.