ಲಕ್ನೋ: ಶ್ರೀ ರಾಮನ ಭಕ್ತ ಮಾತ್ರ ದೆಹಲಿ ಸಿಂಹಾಸನವನ್ನಾ ಆಳಲು ಅರ್ಹ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘರ್ಜಿಸಿದ್ದಾರೆ.
ಗೋರಖ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಆಮ್ ಆದ್ನಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮನನ್ನು ಕಡೆಗನಿಸುವವರಿಗೆ ದೆಹಲಿಯ ಸಿಂಹಾಸನ ಸಿಗುವುದಿಲ್ಲ ಎಂದು ನುಡಿದಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯು “ರಾಮ ಭಕ್ತರು ಮತ್ತು ರಾಮ ದ್ರೋಹಿಗಳ” ನಡುವಿನ ಯುದ್ಧವಾಗಿದೆ. ಈ ಹಿಂದೆ ವೀರ್ ಬಹದ್ದೂರ್ ಸಿಂಗ್ ಯುಪಿ ಮುಖ್ಯಮಂತ್ರಿಯಾಗಿದ್ದಾಗ 1986ರಲ್ಲಿ ರಾಮಮಂದಿರದ ಬೀಗವನ್ನು ಈ ಸ್ಥಳದಿಂದ ತೆರೆಯಲಾಯಿತು. ಇಂದು ಆ ಜಾಗದಲ್ಲಿ ರಾಮಲಲ್ಲಾ ಆಸೀನರಾದಾಗ ದೆಹಲಿಯಿಂದ ದಾಖಲೆಯ ಮತಗಳು ಸಿಗಬೇಕು ಎಂದು ಹೇಳಿದ್ದಾರೆ.
ನೀವು ಪ್ರಧಾನಿ ನರೇಂದ್ರ ಮೋದಿಯನ್ನು ಏಕೆ ಪ್ರೀತಿಸುತ್ತಾರೆ ಮತ್ತು ಬಿಜೆಪಿಯನ್ನು ಏಕೆ ಬೆಂಬಲಿಸುತ್ತಾರೆ ಎಂದು ನಾನು ಸಾರ್ವಜನಿಕರನ್ನು ಕೇಳುತ್ತೇನೆ. ಅವರು ರಾಮನನ್ನು ತಂದವರನ್ನು ನಾವು ಅಧಿಕಾರಕ್ಕೆ ಕರೆತರುತ್ತೇವೆ ಎಂದು ಹೇಳುತ್ತಾರೆ. ಹೀಗಾಗಿ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಒತ್ತಾಸೆಯಾಗಿದೆ . ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು “ರಾಮ ವಿರೋಧಿ” ಗುಣವನ್ನು ಹೊಂದಿದೆ. ವೀರ್ ಬಹದ್ದೂರ್ ಸಿಂಗ್ ರಾಮನ ಭಕ್ತ. ದೇವಸ್ಥಾನದ ಬೀಗ ತೆರೆಯಲು ಕೊಡುಗೆ ನೀಡಿದ್ದರಿಂದ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಿತ್ತು ಎಂದರು.
ಇಂದಿಗೂ ರಾಮಮಂದಿರ ಕಟ್ಟಬಾರದಿತ್ತು ಅಂತಾ ಕಾಂಗ್ರೆಸ್ ಹೇಳುತ್ತಿದೆ. ಈ ಒಂದು ಪಾರ್ಟಿ ಜಗತ್ತಿಗೆ ತಪ್ಪು ಸಂದೇಶ ರವಾನಿಸಿದೆ. ರಾಮಮಂದಿರವನ್ನು ಸರಿಯಾಗಿ ನಿರ್ಮಿಸಿಲ್ಲ ಎಂದು ಸಮಾಜವಾದಿ ಪಕ್ಷ ಹೇಳುತ್ತಿದೆ. ರಾಮ ಮಂದಿರವು ಭಾರತದ ಸನಾತನ ನಂಬಿಕೆಯ ಪ್ರತೀಕವಾಗಿದೆ. ಹೀಗಾಗಿ, ಈ ಚುನಾವಣೆ ರಾಮ ಭಕ್ತರು ಮತ್ತು ರಾಮ ದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಮಭಕ್ತರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಜನರು ಇಂದು ನಿಮಗೆ ಸುಳ್ಳು ಹೇಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಬಲೆಗೆ ಬೀಳಬೇಡಿ. ರಾಮಭಕ್ತರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. 4 ಪಥ, 6 ಪಥದ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಏಮ್ಸ್, ಐಐಟಿ, ಐಐಎಂ ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣ ರಾಮ ಭಕ್ತರ ಕೊಡುಗೆಯಾಗಿದೆ. ಬಡವರು ಇಂದು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಕಿಸಾನ್ ಸಮ್ಮಾನ್ ನಿಧಿಯಲ್ಲಿ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ಮನೆಗೂ ಉಜ್ವಲ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.