ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಯ ಬಾತ್ರೂಮ್ ಒಂದರಲ್ಲಿ ಯುವತಿಯ ಕತ್ತು ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ . ದ್ವಿತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿ ಅನುಮಾನಾಸ್ಪವಾಗಿ ಸಾವನ್ನಪ್ಪಿದ್ದು ಈಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮಗಳನ್ನು ಕಳೆದುಕೊಂಡಿರುವ ಪ್ರಭುಧ್ಯಾ ತಾಯಿ ಹೇಳೊದೆನಂದ್ರೆ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅಂತಾ. ಯುವತಿಯ ಶವದ ಜೊತೆಗೆ ಮೂರು ಡೆತ್ ನೋಟ್ಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಡೆತ್ನೋಟ್ನಲ್ಲಿರುವ ಹ್ಯಾಂಡ್ರೈಟಿಂಗ್ ಹಾಗೂ ಕೊಲೆಯಾಗಿರೊ ಪ್ರಭುಧ್ಯಾ ಹ್ಯಾಂಡ್ರೈಟಿಂಗ್ ಮ್ಯಾಚ್ ಆಗುತ್ತಿಲ್ಲ. ಇದೇ ಕಾರಣಕ್ಕೆನೆ ಇದು ಕೊಲೆನಾ ಅಥವಾ ಸುಸೈಡಾ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.
ಅಷ್ಟಕ್ಕೂ ಕೊಲೆನಾ ಅಥವಾ ಸುಸೈಡಾ..? ಏನೇಲ್ಲಾ ಅನುಮಾನಗಳು..?
• ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಮಾತಾಡಿದ್ದ ಪ್ರಭುಧ್ಯಾ ಮಧ್ಯಾಹ್ನ 3.30ಕ್ಕೆ ಸಾವು
• ಪ್ರಬುದ್ಧ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ
• ಪ್ರಭುಧ್ಯಾ ತಾಯಿ ಸೋದರ ಮನೆಗೆ ಬಂದಾಗ ಮೇನ್ ಡೋರ್ ಲಾಕ್, ಬ್ಯಾಕ್ಡೋರ್ ಓಪನ್ ಆಗಿತ್ತು
• ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ರೆ ಹಾಲ್ನಲ್ಲಿ ರಕ್ತ.
• ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಾತ್ರೂಮ್ನಲ್ಲಿ ಬಿದ್ದಿದ್ದ ಪ್ರಭುಧ್ಯಾ
• ತಾಯಿ ಜೊತೆ ಮಾತನಾಡಿದ ಪ್ರಭುಧ್ಯಾ ಫೋನ್ ನಾಪತ್ತೆ
• ಪ್ರಭುಧ್ಯಾ ಮೊಬೈಲ್ ಫೋನ್ನಲ್ಲೇ ಅಡಗಿದೆಯಾ ಆಕೆ ಸಾವಿನ ರಹಸ್ಯ?
• ಘಟನೆಗೂ ಮೊದಲು ಮನೆಗೆ ಯಾರು ಬಂದಿದ್ದರು.?
• ಡೆತ್ ನೋಟ್ನಲ್ಲಿರುವ ಬರವಣಿಗೆ, ಪ್ರಭುಧ್ಯಾ ನೋಟ್ಸ್ನಲ್ಲಿರುವ ಬರವಣಿಗೆ ಮ್ಯಾಚ್ ಆಗ್ತಿಲ್ಲ
• ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
• ಮರಣೋತ್ತರ ಪರೀಕ್ಷೆಯಲ್ಲಿ ಪ್ರಭುಧ್ಯಾ ಆತ್ಮಹತ್ಯೆನಾ? ಕೊಲೆನಾ? ಅನ್ನೋದು ಬಹಿರಂಗ
• ಘಟನೆಗೆ ಕಾರಣ ಮೊಬೈಲ್ ರಿಕವರಿ ಆದ ನಂತರ ಗೊತ್ತಾಗಲಿದೆ ಅಸಲಿ ಕಾರಣ
• ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರೆ. ಎಡಕೈನಲ್ಲಿ ಮೂಳೆ ಕಾಣೋ ರೀತಿ ಕೈ ಕೂಯ್ದಿರೋದು ಯಾಕೆ?
ಇದನೇಲ್ಲಾ ಗಮನಿಸಿದ್ರೆ ಮೂರು ಬಾರಿ ಕೈ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಭುಧ್ಯಾಳದು ಕೊಲೆನಾ ಅಥವಾ ಸೂಸೈಡ್ ಅನ್ನೋ ದು ಸದ್ಯ ಖಾಕಿ ಪಡೇಗೆ ದೊಡ್ಡ ಸವಾಲಾಗಿದೆ. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಭುಧ್ಯಾ ಸಾವಿನ ರಹಸ್ಯ ಬೇಧಿಸಲು ಮುಂದಾಗಿದ್ದಾರೆ.