ಯುವ ನಟನೆಯ ಚೊಚ್ಚಲ ಸಿನಿಮಾವನ್ನು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕೊಂಡಾಡಿದ್ದಾರೆ. ಈ ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಯುವರಾಜ್ಕುಮಾರ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟ ಕಿಚ್ಚ ಸುದೀಪ್ ಮನೆಗೆ ಯುವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ ಇಷ್ಟವಾಯಿತು ಯುವರಾಜಕುಮಾರ್. ನಿಮ್ಮ ಡ್ಯಾನ್ಸ್ ಅನುವಂಶಿಕವಾಗಿ ಬಂದಿವೆ ಅಂತ ಭಾವಿಸುತ್ತೇನೆ. ಯುವ ಎಲ್ಲಾ ಸಾಮರ್ಥ್ಯಗಳು ಮತ್ತು ನಿರೀಕ್ಷೆಗಳನ್ನು ಮೀರಿ ಈ ಸಿನಿಮಾವನ್ನು ರಚಿಸಲಾಗಿದೆ. ಚೆನ್ನಾಗಿ ಮಾಡಿದ್ದೀರಿ ಸಂತೋಷ್ ಆನಂದ್ ಎಂದು ಬರೆದುಕೊಂಡಿದ್ದಾರೆ.