ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದೇಶಾದ್ಯಂತ ಸುದ್ದಿ ಮಾಡಿದ್ದ ಬುಲ್ಡೋಜರ್ ಕಾನೂನು ಕ್ರಮಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಬುಲ್ಡೋಜರ್ ಕಾರ್ಯಾಚರಣೆ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೆ ಯಾವುದೇ ಮನೆಯನ್ನು ನೆಲಸಮಗೊಳಿಸುವಂತಿಲ್ಲ ಎಂದು ಹೇಳಿದೆ.
ಯಾರಾದರೂ ತಪ್ಪಿತಸ್ಥರು ಎಂದು ಕಂಡು ಬಂದರೆ ಕಾನೂನು ಪ್ರಕಾರ ಮನೆ ಕೆಡವಬಹುದು. ಆದರೆ, ನ್ಯಾಯಾಲಯದ ತೀರ್ಪಿನ ಪ್ರಕಾರ ಆಗಬೇಕೇ ಹೊರತು, ಅಧಿಕಾರಿಗಳೇ ಕಾನೂನು ಕೈಗೆತ್ತಿಕೊಳ್ಳುವ ಜಡ್ಜ್ ಆಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದೆ.
ಇದನ್ನು ಒದಿ : ‘ಸಮೃದ್ಧಿ ರಂಗತಂಡ’ಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ತನಿಷಾ ಕುಪ್ಪಂಡ ಚಾಲನೆ
ಬುಲ್ಡೋಜರ್ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವುದಷ್ಟೇ ಅಧಿಕಾರಿಗಳ ಕೆಲಸ. ಅಧಿಕಾರಿಗಳು ಜಡ್ಜ್ಗಳಾಗಬಾರದು. ಆರೋಪಿಗಳು ಮತ್ತು ಶಿಕ್ಷೆಗೊಳಗಾದವರಿಗೂ ಕೆಲವು ಕಾನೂನು ಬದ್ಧ ಹಕ್ಕುಗಳಿವೆ. ಯಾವುದೋ ಪ್ರಕರಣದ ಆರೋಪಿ ಎಂಬ ಕಾರಣಕ್ಕೆ ಮನೆ ಕೆಡವುವುದು ಕಾನೂನು ಉಲ್ಲಂಘನೆಯಾಗುತ್ತದೆ. ಮನಬಂದಂತೆ ಮನೆ ಕೆಡವಿದರೆ ಪರಿಹಾರ ನೀಡಬೇಕು. ಕಾನೂನು ಪ್ರಕ್ರಿಯೆ ಇಲ್ಲದೆ ಬುಲ್ಡೋಜರ್ಗಳನ್ನು ನಡೆಸುವುದು ಸಂವಿಧಾನ ಬಾಹಿರ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಬ್ಬನೇ ಆರೋಪಿಯಾಗಿದ್ದರೆ ಇಡೀ ಕುಟುಂಬದಿಂದ ಮನೆಯನ್ನು ಏಕೆ ಕಳೆದುಕೊಳ್ಳಬೇಕು. ಬುಲ್ಡೋಜರ್ ಕ್ರಮಕ್ಕೆ ಮುನ್ನ ಆರೋಪಿಗಳ ಪರ ಆಲಿಸಬೇಕು ನಿಯಮಾನುಸಾರ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ಅನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು ಮತ್ತು ಮನೆಯ ಮೇಲೆ ಅಂಟಿಸಬೇಕು.
ಇದನ್ನು ಓದಿ : ಕರ್ನಾಟಕದ ಹಲವೆಡೆ ಭಾನುವಾರದವರೆಗೂ ಮಳೆಯಾರ್ಭಟ! ಕಾಡಲಿದೆ ಚಳಿಗಾಳಿ
ಕ್ರಮ ತೆಗೆದುಕೊಳ್ಳುವ ಮೊದಲು 15 ದಿನಗಳ ಸಮಯವನ್ನು ಪಡೆಯಿರಿ. ನೋಟಿಸ್ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಬೇಕು. ಅಕ್ರಮ ಕಟ್ಟಡ ತೆಗೆಯಲು ಆರೋಪಿಗಳಿಗೆ ಅವಕಾಶ ಸಿಗಬೇಕು. ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡರೆ ಸೂಚನೆಗಳು ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿಆರ್ ಘಾನವಿ ಹಾಗೂ ಕೆವಿ ವಿಶ್ವನಾಥನ್ ಅವರ ದ್ವಿಸದಸ್ಯ ನ್ಯಾಯಪೀಠ ಈ ಕುರಿತು ತೀರ್ಪು ನೀಡಿದೆ.ಯಾವುದೇ ಆರೋಪಿಯಾದರೂ, ಆತನ ಕುಟುಂಬಕ್ಕೂ ಕೂಡಾ ಆರ್ಟಿಕಲ್ 12ರ ಪ್ರಕಾರ ವಸತಿಯ ಹಕ್ಕು ಇದೆ. ಕುಟುಂಬದಲ್ಲಿ ಯಾರೋ ಒಬ್ಬ ತಪ್ಪು ಮಾಡಿದ ಎಂಬ ಕಾರಣಕ್ಕೆ ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಸಂವಿಧಾನ ಬಾಹಿರ ಎಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.