ಕನ್ನಡದ ಎರಡು ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿವೆ. ಈ ಎರಡು ಸಿನಿಮಾಗಳು ನಿರೀಕ್ಷೆಯ ಚಿತ್ರಗಳೇ ಆಗಿವೆ . ಒಂದು ಹಾರರ್ ಕಂಟೆಂಟ್ ಹೊಂದಿದೆ . ಮತ್ತೊಂದು ಚಿತ್ರದಲ್ಲಿ ಲವ್ ಕಥೆಯಾಗಿದೆ . ಈ ಎರಡೂ ಸಿನಿಮಾಗಳು ತಮ್ಮದೇ ರೀತಿಯಲ್ಲಿ ಕುತೂಹಲ ಮೂಡಿಸಿವೆ . ಈ ಎರಡು ಚಿತ್ರದ ಡೈರೆಕ್ಟರ್ಸ್ ತುಂಬಾನೆ ವಿಶೇಷವಾಗಿದ್ದಾರೆ . ಇವರ ನಿರ್ದೇಶನದ ಹಿಂದಿನ ಚಿತ್ರಗಳು ಹಿಟ್ ಆಗಿವೆ. ಇವರ ಚಿತ್ರಗಳು ಬಾಕ್ಸ್ ಆಫಿಸ್ ಅಲ್ಲಿ ಮುಖಾಮುಖಿ ಆಗುತ್ತಿವೆ.
ಸಂಜು ವೆಡ್ಸ್ ಗೀತಾ-2 ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹಾಡುಗಳು ರಿಲೀಸ್ ಆಗಿವೆ. ರಮ್ಯ ಜಾಗಕ್ಕೆ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಂದಿದ್ದಾರೆ. ಶ್ರೀನಗರ ಕಿಟ್ಟಿ ಇಲ್ಲೂ ಮುಂದುವರೆದಿದ್ದಾರೆ. ಡೈರೆಕ್ಟರ್ ನಾಗಶೇಖರ್ ಒಳ್ಳೆ ಸಿನಿಮಾ ಕೊಡ್ತಿರೋ ಖುಷಿಯಲ್ಲಿದ್ದಾರೆ.
ಈ ಸಲ ತಮ್ಮ ಸಂಜು ಮತ್ತು ಗೀತಾಳನ್ನ ವಿದೇಶಕ್ಕೂ ಕರೆದುಕೊಂಡಿದ್ದಾರೆ. ಅಲ್ಲಿಯೇ ಒಂದು ಚೆಂದದ ಕಥೆ ಹೇಳುತ್ತಿದ್ದಾರೆ. ರಚಿತಾ ರಾಮ್ ಮತ್ತು ಶ್ರೀನಗರ ಕಿಟ್ಟಿ ವಿದೇಶಿ ಪ್ರಜೆಗಳ ತರ ಡ್ರೆಸ್ ತೊಟ್ಟು ಕಂಗೊಳಿಸಿದ್ದಾರೆ. ಶ್ರೀಧರ್ ಸಂಭ್ರಮ ಸಂಗೀತಕ್ಕೆ ಕವಿರಾಜ್ ಒಳ್ಳೆ ಹಾಡುಗಳನ್ನ ಬರೆದುಕೊಟ್ಟಿದ್ದಾರೆ.
ಇದೇ ತಿಂಗಳು ಜನವರಿ 10 ರಂದು ಚಿತ್ರ ರಿಲೀಸ್ ಆಗುತ್ತಿದೆ. ಮಳೆಯಂತೆ ಹಾಡು ಈಗಾಗಲೇ ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಈ ಹಾಡನ್ನ ರಿಲೀಸ್ ಮಾಡಿದ್ದಾರೆ. ಬಹುವೆಚ್ಚದಲ್ಲಿಯೇ ನಿರ್ಮಾಣಗೊಂಡ ಈ ಚಿತ್ರ ಒಂದು ನಿರೀಕ್ಷೆ ಹುಟ್ಟುಹಾಕಿದೆ.
ಇದೇ ಚಿತ್ರ ರಿಲೀಸ್ ಆಗೋ ದಿನವೇ ಕನ್ನಡದ ಶರಣ್ ಅಭಿನಯದ ಛೂಮಂತರ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ರಿಲೀಸ್ ಡೇಟ್ ಮೊನ್ನೇನೆ ಅನೌನ್ಸ್ ಆಗಿದೆ. ಈ ಚಿತ್ರದ ರಿಲೀಸ್ ಅನೌನ್ಸ್ ಬಳಿಕವೇ, ಸಂಜು ವೆಡ್ಸ್ ಗೀತಾ-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ ಅಂತಲೇ ಹೇಳಬಹುದು.
ಛೂಮಂತರ್ ಚಿತ್ರದ ಡೈರೆಕ್ಟರ್ ನವನೀತ್ ವಿಶೇಷವಾಗಿದ್ದಾರೆ. ಕರ್ವ ಚಿತ್ರದ ಮೂಲಕ ಕನ್ನಡಕ್ಕೆ ಭಯಂಕರ ಚಿತ್ರ ಕೊಟ್ಟಿದ್ದಾರೆ. ಹಾಲಿವುಡ್ ರೇಂಜ್ನ ಚಿತ್ರವೇ ಇದಾಗಿದೆ.
ಆದರೆ, ಕರ್ವ-2 ಬರ್ತದೆ ಅನ್ನುವ ನಿರೀಕ್ಷೆ ಇದ್ದೇ ಇದೆ. ಇದರ ಮಧ್ಯೆ ಡೈರೆಕ್ಟರ್ ನವನೀತ್ ಈ ಒಂದು ಛೂಮಂತರ್ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಬಹು ತಾರೆಯರೇ ಇದ್ದಾರೆ. ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಶರಣ್, ಚಿಕ್ಕಣ್ಣ, ಗುರು ಕಿರಣ್ ಹೀಗೆ ತಾರೆಯರ ಪಟ್ಟಿ ದೊಡ್ಡದಾಗುತ್ತದೆ.
ಛೂಮಂತರ್ ಚಿತ್ರದ ಟ್ರೈಲರ್ ಭರವಸೆ ಮೂಡಿಸಿದೆ. ಈ ಮೂಲಕ ಶರಣ್ ಕೂಡ ವಿಶೇಷವಾಗಿಯೇ ಬರ್ತಿದ್ದಾರೆ. ಚಿಕ್ಕಣ್ಣ ಮತ್ತು ಶರಣ್ ಈ ಚಿತ್ರದ ಮೂಲಕ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹಾಗೇನೆ ಫಸ್ಟ್ ಟೈಮ್ ಒಟ್ಟಿಗೆ ಹಾಸ್ಯದ ಜೊತೆಗೆ ಭಯಗೊಳಿಸೋ ಕೆಲಸ ಮಾಡುತ್ತಿದ್ದಾರೆ.