ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಸೆಟ್ಗಾಗಿ ನೂರಾರು ಮರಗಳನ್ನು ನಾಶ ಮಾಡಿರುವ ಗಂಭೀರ ಆರೋಪವನ್ನು ಟಾಕ್ಸಿಕ್ ಚಿತ್ರತಂಡ ಎದುರಿಸಿತ್ತು. ಆದರೆ ಇದೀಗ ಟಾಕ್ಸಿಕ್ ಚಿತ್ರತಂಡಕ್ಕೆ ರಿಲೀಫ್ ಸಿಕ್ಕಿದೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ-2 ಚಿತ್ರತಂಡದ ವಿರುದ್ಧ ಅರಣ್ಯ ಹಾನಿ ಮಾಡಿದ ಆರೋಪ ಕೇಳಿ ಬಂದಿದೆ. ಚಿತ್ರೀಕರಣಕ್ಕಾಗಿ ಅರಣ್ಯದ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಂತಾರ-2 ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಹೊಸೂರು ಗ್ರಾಮ ಪಂಚಾಯಿತಿ ಹೆರೂರು ಗ್ರಾಮದಲ್ಲಿ ಕಾಂತಾರ-2 ಸಿನಿಮಾ ಚಿತ್ರೀಕರಣ ಸ್ಥಳದಲ್ಲಿ ಅರಣ್ಯಕ್ಕೆ ಹಾನಿ ಮಾಡಲಾಗಿದೆ.
ಕಾಂತಾರ-2 ಸಿನಿಮಾ ಚಿತ್ರೀಕರಣ ಜನವರಿ 2 ರಿಂದ ನಡೆಯುತ್ತಿದೆ. ಗೋಮಾಳ ಜಾಗಕ್ಕೆ ಪರವಾನಿಗೆ ಪಡೆದಿರುವ ಚಿತ್ರತಂಡ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ನಾಶ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಚಿತ್ರತಂಡದ ನಡೆಯ ಬಗ್ಗೆ ಹೆರೂರು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರೀಕರಣಕ್ಕೆ ಯಾವೆಲ್ಲ ಪರವಾನಿಗೆ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಅರಣ್ಯ, ಕಂದಾಯ ಇಲಾಖೆಯವರು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B