ಟಿಪ್ಪು ಸುಲ್ತಾನ್, ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಅಪ್ಪಿದ ಮೈಸೂರು ಸಂಸ್ಥಾನದ ಅರಸ. ಈತ ಸ್ವಾತಂತ್ರ್ಯ ಹೋರಾಟಗಾರನೋ, ಧರ್ಮ ಪ್ರೇಮಿಯೋ.. ಇವತ್ತಿಗೂ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ಈತನ ಖಡ್ಗಕ್ಕೆ ಇರುವ ಬೇಡಿಕೆ ಇದೆಯಲ್ಲ, ಅದಕ್ಕೆ ಮಾತ್ರ ಬೆಲೆಕಟ್ಟಲಾಗದು. ಇದೀಗ ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜಾಗಿದೆ.
ʻsword with the shiny bladeʼ ಎಂದು ಬರೆದಿರುವ ಖಡ್ಗ, ಲಂಡನ್ನಲ್ಲಿ ನಡೆದ ಹರಾಜಿನಲ್ಲಿ 317,000 ಪೌಂಡ್ಗೇ ಹರಾಜಾಗಿದೆ (ರೂಪಾಯಿಗಳ ಲೆಕ್ಕದಲ್ಲಿ 3.4 ಕೋಟಿ). ಈ ಖಡ್ಗವನ್ನು ಟಿಪ್ಪು ಸುಲ್ತಾನ್1799ರ ಅಂತಿಮ ಯುದ್ಧದಲ್ಲಿ ಬಳಸಿದ್ದ ಎನ್ನುವ ಇತಿಹಾಸವಿದೆ. ಬ್ರಿಟಿಷರಿಂದ ಟಿಪ್ಪು ಸುಲ್ತಾನ್ಕೊಲ್ಲಲ್ಪಟ್ಟಾಗ ಟಿಪ್ಪು ಸುಲ್ತಾನ್ಜೊತೆಯಲ್ಲಿದ್ದದ್ದು ಇದೇ ಖಡ್ಗ ಎನ್ನುತ್ತದೆ ಚರಿತ್ರೆ.
ಇದನ್ನು ಓದಿ:ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಅನ್ನಪೂರ್ಣ ತುಕಾರಾಂ!
ಉಕ್ಕಿನಿಂದ ಮಾಡಿರುವ ಈ ಖಡ್ಗದಲ್ಲಿ ಬಬ್ರಿ (ಹುಲಿಯ ಪಟ್ಟೆಗಳು)ಯ ಡಿಸೈನ್ಇದೆ. ಅರೇಬಿಕ್ಭಾಷೆಯ ʻhá ಎಂಬ ಚಿನ್ನ ವರ್ಣದಲ್ಲಿ ಬರೆದ ಉಲ್ಲೇಖವಿದೆ. ಇದು ಟಿಪ್ಪು ಸುಲ್ತಾನ್ನ ತಂದೆ ಹೈದರಾಲಿಯನ್ನು ಸೂಚಿಸುತ್ತದಂತೆ. ಈ ಖಡ್ಗವನ್ನು ಹರಾಜಿಗಿಟ್ಟಿದ್ದ ವ್ಯಕ್ತಿಯ ಹೆಸರು ಕ್ಯಾಪ್ಟನ್ ಜೇಮ್ಸ್ಆಂಡ್ರ್ಯೂ ಡಿಕ್. ಈತ ಶ್ರೀರಂಗಪಟ್ಟಣದಲ್ಲಿ ನಡೆದ ಯುದ್ಧದಲ್ಲಿ 75ನೇ ಹೈಲ್ಯಾಂಡ್ರೆಜಿಮೆಂಟ್ನ ಪದಾತಿದಳದ ಲೆಫ್ಟಿನೆಂಟ್ಆಗಿದ್ದರಂತೆ. ಶ್ರೀರಂಗಪಟ್ಟಣದಲ್ಲಿ ನಡೆದ ಯುದ್ಧದಲ್ಲಿ ಕೋಟೆ ಹತ್ತುವುದರಲ್ಲಿ ಪ್ರವೀಣನಾಗಿದ್ದ ಡಿಕ್, ಶ್ರೀರಂಗಪಟ್ಟಣವನ್ನು ಪ್ರವೇಶಿಸಿದ ಮೊದಲ ಬ್ರಿಟಿಷ್ಸೈನಿಕ ಎನ್ನಲಾಗಿದೆ. ಅಷ್ಟೇ ಅಲ್ಲದೆ ಟಿಪ್ಪು ಸುಲ್ತಾನ್ಮೃತದೇಹವನ್ನು ಪತ್ತೆ ಹಚ್ಚಿದ್ದೂ ಕೂಡಾ ಇದೇ ಡಿಕ್ಎನ್ನುವುದು ಇತಿಹಾಸದಲ್ಲಿದೆ.
ಟಿಪ್ಪು ಸುಲ್ತಾನ್ನದ್ದು ಎನ್ನಲಾದ ಖಡ್ಗಗಳಲ್ಲಿ ಇದು ಅಂತಿಮ ಯುದ್ಧದಲ್ಲಿ ಬಳಸಿದ್ದ ಖಡ್ಗ ಹಾಗೂ ಟಿಪ್ಪು ಹತ್ಯೆಯಾದಾಗ ಆತನ ಒರೆಯಲ್ಲಿದ್ದ ಖಡ್ಗ ಎನ್ನುವ ಕಾರಣವೂ ಈ ಖಡ್ಗದ ಮಹತ್ವವನ್ನು ಹೆಚ್ಚಿಸಿದೆ. ಕಳೆದ ವರ್ಷವೂ ಕೂಡಾ ಟಿಪ್ಪು ಸುಲ್ತಾನನ ಖಡ್ಗವೊಂದು ಹರಾಜಿಗೆ ಬಂದಿತ್ತು. ಆ ಖಡ್ಗ ದಾಖಲೆಯ 143 ಕೋಟಿ ರೂ.ಗೆ ಹರಾಜಾಗಿತ್ತು. ಟಿಪ್ಪು ಸುಲ್ತಾನ್ಸಂಹಾರದ ನಂತರ ಟಿಪ್ಪು ಸುಲ್ತಾನ್ಅರಮನೆಗೆ ಲಗ್ಗೆಯಿಟ್ಟಿದ್ದ ಬ್ರಿಟಿಷ್ಸೈನಿಕರು, ಟಿಪ್ಪು ಸುಲ್ತಾನ್ಉಗ್ರಾಣದಲ್ಲಿದ್ದ ಹಲವು ಖಡ್ಗಗಳನ್ನು ಬ್ರಿಟನ್ಗೆ ಹೊತ್ತೊಯ್ದಿದ್ದರು. ಈಗಲೂ ಕೂಡಾ ಟಿಪ್ಪು ಸುಲ್ತಾನ್ಖಡ್ಗ ಎಂಬ ಹೆಸರಿನಲ್ಲಿ ಹರಾಜುಗಳು ನಡೆಯುತ್ತಲೇ ಇರುತ್ತವೆ. ಇತಿಹಾಸದ ಮೌಲ್ಯ ಇರುವ ಖಡ್ಗಕ್ಕೆ ಡಿಮ್ಯಾಂಡ್ಕೂಡಾ ಇದೆ. ಹೀಗಾಗಿಯೇ ಪ್ರಾಚ್ಯವಸ್ತುಗಳ ಹರಾಜಿನಲ್ಲಿ ಟಿಪ್ಪು ಸುಲ್ತಾನ್ಖಡ್ಗಗಳಿಗೆ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಆದರೆ, ಟಿಪ್ಪು ಸುಲ್ತಾನ್ಧರಿಸಿದ್ದ, ಅಂತಿಮ ಖಡ್ಗ ಎಂದೇ ಹೆಸರಾಗಿರುವ ಖಡ್ಗಕ್ಕೆ ಸಿಕ್ಕಿರುವ ಮೌಲ್ಯ ಕೇವಲ 3.4 ಕೋಟಿನಾ.. ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
ಇದನ್ನು ಓದಿ:ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಬೊಮ್ಮಾಯಿ ಕುಟುಂಬ!
ಆದರೆ ಈಗ ಈ ಖಡ್ಗ ಖರೀದಿಸಿರುವ ವ್ಯಕ್ತಿಯ ದುರದೃಷ್ಟವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಟಿಪ್ಪು ಸುಲ್ತಾನ್ವೀರ ಯೋಧನೇ ಇರಬಹುದು, ಆದರೆ ಟಿಪ್ಪು ಸುಲ್ತಾನನ ಖಡ್ಗ ಮಾತ್ರ ದುರದೃಷ್ಟವನ್ನೇ ಹೊತ್ತು ತಂದಿದೆ ಎನ್ನುವುದು ನಂಬಿಕೆ. ಟಿಪ್ಪು ಸುಲ್ತಾನ್ಖಡ್ಗವನ್ನು ಭಾರತಕ್ಕೆ ತಂದ ಮೊದಲಿಗ ಉದ್ಯಮಿ ವಿಜಯ್ಮಲ್ಯ, ಖಡ್ಗ ಬಂದ ನಂತರ ದಿವಾಳಿಯಾಗಿ, ಈಗ ತಲೆಮರೆಸಿಕೊಂಡು ತಿರುಗುವಂತಾಗಿದೆ. ವಿಜಯ್ಮಲ್ಯನನ್ನು ಭಾರತಕ್ಕೆ ತರಲು ಈಗಲೂ ಕಾನೂನು ಹೋರಾಟ ನಡೆಯುತ್ತಿದೆ. ಇನ್ನು ಟಿಪ್ಪು ಸುಲ್ತಾನ್ಕುರಿತ ಧಾರಾವಾಹಿ ಚಿತ್ರಿಸಿದ್ದ ಸಂಜಯ್ಖಾನ್ಅನುಭವಿಸಿದ್ದ ಸಂಕಟಗಳು ಒಂದೆರಡಲ್ಲ. ಟಿಪ್ಪು ಸುಲ್ತಾನ್ಧಾರಾವಾಹಿ ಚಿತ್ರೀಕರಣದ ವೇಳೆಯಲ್ಲಿಯೇ ಅಗ್ನಿ ದುರಂತ ಸಂಭವಿಸಿ, ಸೆಟ್ಸುಟ್ಟುಹೋಗಿ ಹಲವರು ಸಾವನ್ನಪ್ಪಿದ್ದರು. ಅದಾದ ನಂತರ ಸಂಜಯ್ಖಾನ್ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ.